ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ವಿರುದ್ಧ ರಷ್ಯಾ ಸಮರ ಮುಂದುವರಿದಿದ್ದು, ಕಠಿಣ ನಿರ್ಬಂಧಗಳನ್ನು ವಿಧಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಭಾರೀ ಪರಿಣಾಮ ಬೀರುತ್ತಿದೆ.
ತೈಲ ಬೆಲೆ ಬ್ಯಾರೆಲ್‌ಗೆ 10 ಡಾಲರ್‌ಗಿಂತ ಹೆಚ್ಚು ಜಿಗಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲವು $10 ಏರಿಕೆ ಬಳಿಕ ಬ್ಯಾರಲ್‌ಗೆ 130 ಡಾಲರ್ ಹೆಚ್ಚಿದೆ. ಅಮೆರಿಕದಲ್ಲಿ ಕಚ್ಚಾ ತೈಲ ಬ್ಯಾರೆಲ್‌ಗೆ $124 ಡಾಲರ್ ಇದ್ದು,9 ಡಾಲರ್ ಜಿಗಿತವಾಗಿದೆ.
ಉಕ್ರೇನ್‌ನ ಎರಡು ನಗರಗಳಲ್ಲಿ ಘೋಷಿಸಿದ್ದ ತಾತ್ಕಾಲಿಕ ಕದನವಿರಾಮ ವಿಫಲವಾಗಿದೆ ಎಂದು ಎರಡೂ ದೇಶಗಳು ಆರೋಪಿಸಿದೆ.ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿಯ ಎರಡು ಘಟಕಗಳನ್ನು ಸೇನಾ ಪಡೆಗಳು ಮುಚ್ಚಿಸಿವೆ ಎಂಬ ಹೇಳಿಕೆ ನಂತರ ತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗಿದೆ.