October 11, 2026
Sunday, October 11, 2026
spot_img

ನಮೋ ಸದಾ ಯಂಗ್‌ & ಎನರ್ಜೆಟಿಕ್‌! 76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿಗೆ ಜನ್ಮದಿನದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಧಾನಿ ಮೋದಿಗೆ ಇಂದು 76ನೇ ಜನ್ಮದಿನದ ಸಂಭ್ರಮ. ಸದಾ ಯಂಗ್‌ ಹಾಗೂ ಎನರ್ಜಿಟಿಕ್‌ ಆಗಿ ಕಾಣುವ ಪ್ರಧಾನಿ ಮೋದಿಗೆ ವಿಶ್ವಾದ್ಯಂತ ನಾಯಕರು ಶುಭಾಷಯಗಳನ್ನು ಕೋರುತ್ತಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ತಮ್ಮ ಶುಭಾಶಯ ಸಂದೇಶಗಳಲ್ಲಿ ಮೋದಿಯವರನ್ನು ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣಿಸಿದ್ದಾರೆ. ಕೆಲವರು ಅವರನ್ನು ‘ನವ ಭಾರತದ ಶಿಲ್ಪಿ’ ಎಂದೂ ಕರೆದಿದ್ದಾರೆ. ಅವರ ನಾಯಕತ್ವ, ಸಾರ್ವಜನಿಕ ಸೇವೆಯ ಬದ್ಧತೆ ಹಾಗೂ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎಂದಿದ್ದಾರೆ. ‘ಒಂದು ಭಾರತ-ಶ್ರೇಷ್ಠ ಭಾರತ’ದ ದೃಷ್ಟಿಕೋನ ಹೊಂದಿರುವ ಹಾಗೂ ‘ನವ ಭಾರತದ ಶಿಲ್ಪಿ’ಯಾದ ಮೋದಿಯವರು ದೇಶದ ಜನರ ಜೀವನದಲ್ಲಿ ಸಂತೋಷ, ಸಮೃದ್ಧಿ, ಭದ್ರತೆ ಮತ್ತು ಹೆಮ್ಮೆಯ ಹೊಸ ಯುಗವನ್ನು ತರಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿಯವರ ನಾಯಕತ್ವದ ಪ್ರಮುಖ ಗುಣವೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿ ಸದಾ ಆಡಳಿತದ ಕೇಂದ್ರದಲ್ಲಿರುವುದು ಎಂದು ಹೇಳಿದ್ದಾರೆ. ತಾಯಿ ನೀಡುವ ಆಶೀರ್ವಾದದಿಂದ ಹಿಡಿದು ಆಯುಷ್ಮಾನ್ ಕಾರ್ಡ್‌ನಿಂದ ಕುಟುಂಬಕ್ಕೆ ನೆರವಾದ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಳ್ಳುವ ಅನುಭವದವರೆಗೆ, ಸರ್ಕಾರದ ಯೋಜನೆಗಳ ನಿಜವಾದ ಅರ್ಥ ಜನರ ಬದುಕಿನಲ್ಲಿನ ಬದಲಾವಣೆಯಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ತ್ರಿವಳಿ ತಲಾಖ್‌ನಿಂದ ಮುಕ್ತಿ, ನಾರಿ ಶಕ್ತಿ ವಂದನ ಅಧಿನಿಯಮದಂತಹ ಕ್ರಮಗಳು ಮಹಿಳೆಯರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿವೆ. ಸ್ಟಾರ್ಟ್‌ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಹೊಸ ಶಿಕ್ಷಣ ನೀತಿ ಯುವಜನರಿಗೆ ಅವಕಾಶಗಳ ಬಾಗಿಲು ತೆರೆದಿವೆ ಎಂದು ಹೇಳಿದ್ದಾರೆ. ನಟಿ ಜಾಹ್ನವಿ ಕಪೂರ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಜನ್ಮದಿನದ ಶುಭಾಷಯಗಳು. ಸದಾ ಆರೋಗ್ಯವಾಗಿರಿ, ಸಂತಸದಿಂದಿರಿ. ನಿಮ್ಮ ಲೀಡರ್‌ಶಿಪ್‌ನಿಂದ ಎಲ್ಲರನ್ನೂ ಇನ್ಸ್‌ಪೈರ್‌ ಮಾಡುತ್ತಲೇ ಇರಿ ಎಂದು ಹೇಳಿದ್ದಾರೆ.

Must Read