ಇದೇನಪ್ಪಾ ಇದು…ಗಂಡಾಗಿ ಬದಲಾದ ಮಿಲ್ಕಿ ಬ್ಯೂಟಿ ತಮನ್ನಾ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯದ ಇತ್ತೀಚಿನ ಚಿತ್ರ F3 ಇದೀಗ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತಮನ್ನಾ ಅಭಿನಯಕ್ಕೆ ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಫ್2 ಚಿತ್ರಕ್ಕೆ ಹೋಲಿಸಿದರೆ ಈ ಸಿನಿಮಾದಲ್ಲಿ ತಮನ್ನಾ ವಿಭಿನ್ನವಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದೀಗ ತಮ್ಮ ಇನ್‌ಸ್ಟಾ ರೀಲ್‌ಗಳಲ್ಲಿ ತಮನ್ನಾ ಇದ್ದಕ್ಕಿದ್ದಂತೆ ಗಂಡಿನ ವೇಷ ಧರಿಸಿ ಅಭಿಮಾನಿಗಳಿಗೆ ಸಾಕ್‌ ನೀಡಿದ್ದಾರೆ.

ಸೀರೆಯುಟ್ಟು ಮಿರ ಮಿರ ಮಿಂಚಿದ ತಮನ್ನಾ ಮಾಬಿಲು ಹಾಕಿಕೊಂಡು ಇದ್ದಕ್ಕಿದ್ದಂತೆ ಪುರುಷರ ವೇಷದಲ್ಲಿ ಬಂದಿದ್ದು ಅಚ್ಚರಿ ಮೂಡಿಸಿದೆ. ಇದೇನು ಬೇರೆ ಸಿನಿಮಾಗಲ್ಲ ಈ ಗೆಟಪ್ ಎಫ್3 ಚಿತ್ರದಲ್ಲಿನ ಆಕೆಯ ಪಾತ್ರಕ್ಕೆ ಸಂಬಂಧಿಸಿದ್ದು. ಅನಿಲ್ ರಾವಿಪುಡಿ ನಿರ್ದೇಶನದ ಎಫ್3 ಚಿತ್ರದ ಕಥೆಯ ಭಾಗವಾಗಿ ತಮನ್ನಾ ಗಂಡಿನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಿನಿಮಾ ನೋಡಿದವರು ಸಿನಿಮಾದಲ್ಲಿ ಆಕೆಗೆ ಗರ್ಲ್ ಫ್ರೆಂಡ್ ಇದ್ದು, ಅವರಿಬ್ಬರ ನಡುವೆ ಡ್ಯುಯೆಟ್ ಸಾಂಗ್ ಕೂಡ ಇದೆ ಅಂತಾರೆ ಸಿನಿಮಾ ನೋಡಿದವರು. ತಮನ್ನಾ ಈ ರೀಲ್‌ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!