ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ವಿಲೀನವಾದ ಅಮರ್ ಜವಾನ್ ಜ್ಯೋತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯ ಇಂಡಿಯಾ ಗೇಟ್​​ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಅಮರ್ ಜವಾನ್ ಜ್ಯೋತಿಯನ್ನು ವಿಲೀನಗೊಳಿಸಲಾಗಿದೆ.
1947ರ ಬಳಿಕ ನಡೆದ ಭಾರತ-ಪಾಕಿಸ್ತಾನ ಯುದ್ಧ ಮತ್ತು ಚೀನಾ ಜತೆಗಿನ ಸಂಘರ್ಷದ ವೇಳೆ ಹುತಾತ್ಮರಾಗಿರುವ ಭಾರತೀಯ ಯೋಧರ ನೆನಪಿಗಾಗಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಲಾಗಿದ್ದು, ಇದೀಗ ಅದರೊಳಗೆ ಅಮರ್ ಜವಾನ್ ಜ್ಯೋತಿ ವಿಲೀನ ಮಾಡಲಾಗಿದೆ.
ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ, ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲೇ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಇದೀಗ ಎರಡನ್ನು ವಿಲೀನವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶಕ್ಕಾಗಿ ಅಮರರಾಗಿರುವ ಯೋಧರ ಗೌರವ ಸೂಚಕವಾಗಿ ಅಮರ್​ ಜವಾನ್​ ಜ್ಯೋತಿ ಉರಿಯುತ್ತಿದ್ದು, ಗಣರಾಜ್ಯೋತ್ಸವಕ್ಕೆ ಕೆಲ ದಿನಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಈ ಎರಡನ್ನು ಎಲೀನಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!