ಸುಲಿಗೆ, ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ

ಹೊಸದಿಗಂತ ವರದಿ,ಮೈಸೂರು:

ಸುಲಿಗೆ ಮತ್ತು ದ್ವಿ ಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಮೈಸೂರು ನಗರದ ಆಲನಹಳ್ಳಿ ಠಾಣೆಯ ಪೊಲೀಸರು, ಆರೋಪಿಗಳಿಂದ ರೂ. 5,05,000 ಮೌಲ್ಯದ 6 ದ್ವಿ ಚಕ್ರ ವಾಹನಗಳು, 30 ಗ್ರಾಂ ಚಿನ್ನದ ಸರ, 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಸುಲಿಗೆ ಪ್ರಕರಣಕ್ಕೆ ಸಂಬAಧಪಟ್ಟAತೆ, ಆಲನಹಳ್ಳಿ ಪೊಲೀಸರು ಖಚಿತ ಮಾಹಿತಿ ಮೇಲೆ 4 ಮಂದಿ ಆರೋಪಿಗಳನ್ನು ಬಂಧಿಸಿ, ವಿಚಾರ ಮಾಡಲಾಗಿ, ಆರೋಪಿಗಳು ಮೈಸೂರು ನಗರ, ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸುಲಿಗೆ ಮತ್ತು ದ್ವಿ ಚಕ್ರ ವಾಹನಗಳ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದರ ಮೇರೆಗೆ, ಅವರಿಂದ ಒಟ್ಟು 08 ಪ್ರಕರಣಗಳಿಗೆ ಸಂಬAಧಪಟ್ಟAತೆ ಒಟ್ಟು ರೂ. 5,05,000 ಮೌಲ್ಯದ 06 ದ್ವಿ ಚಕ್ರ ವಾಹನಗಳು, 30 ಗ್ರಾಂ ತೂಕದ ಒಂದು ಚಿನ್ನದ ಸರ ಮತ್ತು 01 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ 02 ದ್ವಿಚಕ್ರ ವಾಹನಗಳು ಮತ್ತು ಚಾಕುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಪತ್ತೆ ಕಾರ್ಯದಿಂದ ಆಲನಹಳ್ಳಿ ಪೊಲೀಸ್ ಠಾಣೆಯ 02- ಸುಲಿಗೆ, 03 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ -01, ಟಿ.ನರಸೀಪುರ ಪೊಲೀಸ್ ಠಾಣೆಯ -01, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!