ಏಷ್ಯನ್​ ಗೇಮ್ಸ್​ನಲ್ಲಿ ಅಮೋಘ ಸಾಧನೆ: ಅಥ್ಲೀಟ್​​ಗಳ ಜೊತೆ ನಾಳೆ ಪ್ರಧಾನಿ ಮೋದಿ ಸಂವಾದ!

ಹೊಸದಿಂತ ಡಿಜಿಟಲ್‌ ಡೆಸ್ಕ್:‌

19ನೇ ಏಷ್ಯನ್​ ಗೇಮ್ಸ್​ನಲ್ಲಿ ಅಮೋಘ ಸಾಧನೆ ಮಾಡಿದ ಭಾರತದ ಅಥ್ಲೀಟ್​​ಗಳು ಇದೇ ಮೊದಲ ಬಾರಿಗೆ ‘ಶತಕ ಪದಕ’ಗಳ ಬೇಟೆಯಾಡಿದ್ದಾರೆ.

ಇದೀಗ ಈ ಆಟಗಾರರೊಂದಿಗೆ ನಾಳೆ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುವರು. ದೆಹಲಿಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಸಂಜೆ 4:30ಕ್ಕೆ ಕಾರ್ಯಕ್ರಮ ನಡೆಯಲಿದೆ.

ಭಾರತೀಯ ತಂಡದ ಅಥ್ಲೀಟ್‌ಗಳು, ತರಬೇತುದಾರರು, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

‘ಅಬ್​ ಕಿ ಬಾರ್​ 100 ಪಾರ್’​ (ಈ ಬಾರಿ 100 ಪದಕಗಳ ಗಡಿಯಾಚೆ) ಎಂಬ ಘೋಷ ವಾಕ್ಯದೊಂದಿದೆ ಹೊಸ ಹುಮ್ಮಸ್ಸಿನಲ್ಲಿ ಏಷ್ಯನ್​ ಗೇಮ್ಸ್​ಗೆ ಭಾರತೀಯ ಅಥ್ಲೀಟ್​ಗಳು ಪ್ರವೇಶಿಸಿದ್ದರು. ಅದರಂತೆ, ಸ್ಪರ್ಧಿಗಳು ಇತಿಹಾಸ ನಿರ್ಮಿಸಿದ್ದಾರೆ. 2018ರಲ್ಲಿ ಭಾರತ ಗೆದ್ದಿದ್ದ 70 ಪದಕದ ದಾಖಲೆ ಮೀರಿ ಶತಕ ಪದಕಗಳ ಗಡಿ ಮೀರಿದ ಸಾಧನೆ ತೋರಿದ್ದಾರೆ. 28 ಚಿನ್ನ, 38 ಬೆಳ್ಳಿ ಹಾಗೂ 41 ಕಂಚಿನ ಪದಕ ಸೇರಿದಂತೆ ಭಾರತ ಒಟ್ಟು 107 ಪದಕಗಳನ್ನು ಜಯಿಸಿದೆ.ಈ ಮೂಲಕ, 2024ರ ಪ್ಯಾರಿಸ್ ಒಲಿಂಪಿಕ್ಸ್​ಗೂ ಮುನ್ನ ಏಷ್ಯನ್​ ಕ್ರೀಡಾಕೂಟದಲ್ಲಿ ದೇಶದ ಅಥ್ಲೀಟ್​ಗಳು ಹೊಸ ಭರವಸೆ ಮೂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!