Wednesday, November 29, 2023

Latest Posts

ಅಮೆರಿಕದಲ್ಲಿ ಅತಿದೊಡ್ಡ ಹಿಂದು ದೇಗುಲ ಲೋಕಾರ್ಪಣೆ!

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದಲ್ಲಿ ಅತಿದೊಡ್ಡ ಹಿಂದು ದೇಗುಲ ಲೋಕಾರ್ಪಣೆ ಆಗಿದೆ. ಈ ಮೂಲಕ ಭಾರತ ಮೂಲದ ಅಮೆರಿಕನ್ನರು ಸಂಭ್ರಮಿಸಿದ್ದಾರೆ.
ಆಧುನಿಕ ಕಾಲ ಘಟ್ಟದಲ್ಲೇ ಅತಿ ದೊಡ್ಡ ದೇಗುಲ ಎಂಬ ಖ್ಯಾತಿ ಪಡೆದಿರುವ ನ್ಯೂಜೆರ್ಸಿ ದೇವಸ್ಥಾನ ಭಾನುವಾರ ಅಂದ್ರೆ ನಿನ್ನೆ ಉದ್ಘಾಟನೆಯಾಗಿದೆ. ಇಂದಿನಿಂದ ಭಕ್ತರಿಗೆ ತೆರೆಯಲಿದೆ.

ಅಂದಹಾಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಇದೀಗ ಲೋಕಾರ್ಪಣೆ ಮಾಡಲಾಗಿರುವ ದೇಗುಲ ಸುಮಾರು 183 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ದೇಗುಲವನ್ನು 12 ಸಾವಿರ ಸ್ವಯಂ ಸೇವಕರೇ ನಿರ್ಮಾಣ ಮಾಡಿರುವುದು ವಿಶೇಷ. ಬಿಎಪಿಎಸ್‌ ಸ್ವಾಮಿನಾರಾಯಣ್‌ ಅಕ್ಷರಧಾಮ ದೇಗುಲವನ್ನು ನಿರ್ಮಿಸಿದ್ದು, ಆಧುನಿಕ ಕಾಲದಲ್ಲಿ ಭಾರತದಿಂದ ಹೊರಗೆ ನಿರ್ಮಿಸಿರುವ ಅತಿ ದೊಡ್ಡ ದೇಗುಲ ಎಂಬ ಹೆಮ್ಮೆಯನ್ನೂ ಈ ದೇವಸ್ಥಾನ ಪಡೆದಿದೆ. ಸುಮಾರು 4.7 ದಶಲಕ್ಷ ಗಂಟೆ ಸಮಯವನ್ನು ದೇಗುಲದ ನಿರ್ಮಾಣಕ್ಕೆ ತೆಗೆದುಕೊಳ್ಳಲಾಗಿದೆ. ಈ ಮೂಲಕ ಎಲ್ಲಾ ವಿಚಾರದಲ್ಲೂ ಅಮೆರಿಕದಲ್ಲಿ ನಿರ್ಮಾಣವಾಗಿರುವ ದೇಗುಲ ದಾಖಲೆ ಬರೆದಿದೆ.

2011ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಶುರುವಾಗಿತ್ತು,12 ವರ್ಷಗಳ ಕಾಲ ಸತತ ಶ್ರಮದ ನಂತರ ದೇವಾಲಯ ಲೋಕಾರ್ಪಣೆಯಾಗಿದೆ. ಅದ್ಧೂರಿಯಾಗಿ ಸಮಾರಂಭ ಆಯೋಜನೆ ಮಾಡಿ, ದೇಗುಲ ಲೋಕಾರ್ಪಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!