Friday, December 8, 2023

Latest Posts

HEALTHY FOOD| ಪಪ್ಪಾಯ ಹಣ್ಣಿನ ಅದ್ಭುತ ಗುಣಗಳಿವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಮೀಣ ಭಾಗದಲ್ಲಿ ಮಾಮೂಲಿಯಾಗಿರುವ ಪಪ್ಪಾಯ, ಎಲ್ಲಾ ಹಣ್ಣುಗಳ ಅಂಗಡಿಯಲ್ಲೂ ಇಂದು ಬೇಡಿಕೆಯಿರುವ ಹಣ್ಣಾಗಿದೆ. ಸಾಮಾನ್ಯವಾಗಿ ಎಲ್ಲಾ ಋತುಗಳಲ್ಲೂ ಇದು ದೊರೆಯುತ್ತದೆ. ಅನೇಕ ರೋಗಗಳಿಗೆ ಔಷಧವಾಗಿ ಪಪ್ಪಾಯ ಬಳಕೆಯಲ್ಲಿದೆ. ಈ ಹಣ್ಣಿನ ಅದ್ಭುತ ಗುಣಗಳಿಂದಾಗಿಯೇ ಇಂದು ಭಾರೀ ಬೇಡಿಕೆ ಪಡೆದುಕೊಂಡಿದೆ.

ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುತ್ತದೆ. ಇದು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್‌  ಸಿ ಯನ್ನು ಹೊಂದಿದೆ ಮತ್ತು ಜೀವಸತ್ವಗಳು ಎ ಮತ್ತು ಬಿ ಗಳ ಉತ್ತಮ ಮೂಲವಾಗಿದೆ. ಹೊಟ್ಟೆ ಸಮಸ್ಯೆಗಳಾದ ಅಜೀರ್ಣ, ಹೊಟ್ಟೆ ಹುಣ್ಣು , ಹೊಟ್ಟೆ ಮತ್ತು ಎದೆ ಉರಿ ಸಮಸ್ಯೆಗಳಿಗೆ  ಈ ಹಣ್ಣು ರಾಮಬಾಣವಾಗಿದೆ.  ಪಿತ್ತಕೋಶದಲ್ಲಿರುವ ವಿಷ ವಸ್ತುಗಳನ್ನು ಹೊರ ಹಾಕುವಲ್ಲಿ ಇದು ಸಹಕಾರಿ.

ಕೊಬ್ಬು ನಿಯಂತ್ರಣಕ್ಕೆ ಸಹಕಾರಿ: ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯಿ ಉತ್ತಮವಾದ ಫೈಬರ್‌ಗಳ ಮೂಲವಾಗಿದೆ. ಪಪ್ಪಾಯಿ ಸೇವಿಸುವ ಮೂಲಕ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಹೆಚ್ಚಾಗುತ್ತದೆ. ಪಪ್ಪಾಯದಲ್ಲಿ ಮಿಟಮಿನ್‌ ಸಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಪಪ್ಪಾಯ ಮಿಟಮಿನ್‌ ಎ ಮತ್ತು ಬೀಟಾ -ಕ್ಯಾರೋಟಿನ್, ಝೀಕ್ಸಾಂಥಿನ್‌ ಸೈಟೋಟಾಂಥಿನ್‌ ಮತ್ತು ಲ್ಯೂಟಿನ್‌ನಂತಹ ಫ್ಲೇವೊನೈಡ್ಸ್‌ಗಳು ಸಮೃದ್ಧವಾಗಿವೆ. ಇದು ವಯಸ್ಸಿಗೆ ಸಂಬಂಧಿಸಿದ ಸ್ನಾಯುವಿನ ಅವನತಿಗೆ ಅಪಾಯವನ್ನುಂಟು ಮಾಡುತ್ತದೆ . ಲ್ಯೂಟಿನ್‌ ಮತ್ತು ಝೀಕ್ಸಾಂಥಿನ್‌ ಎರಡು ಗ್ಲೊಕೊಮಾ ಕಣ್ಣಿನ ಪೊರೆ ಹಾಗೂ ಇತರ ದೀರ್ಘ‌ಕಾಲದ ಕಣ್ಣಿನ ರೋಗಗಳನ್ನು ತಡೆಗಟ್ಟುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಪಪ್ಪಾಯಿಯಲ್ಲಿ ಫೈಬರ್‌ ಹೆಚ್ಚಿರುತ್ತದೆ ಹಾಗಾಗಿ ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. 100 ಗ್ರಾಂಗಳಷ್ಟು ಪಪ್ಪಾಯವು 43 ಕ್ಯಾಲೋರಿಗಳನ್ನು ಮಾತ್ರ ಹೊಂದಿದೆ. ಪಪ್ಪಾಯಲ್ಲಿನ ನಾರಿನ ಅಂಶವು ಮಲಬದ್ಧತೆಯನ್ನು ತಡೆಯುತ್ತದೆ.

ಸಕ್ಕರೆ ನಿಯಂತ್ರಣ ಮಾಡುತ್ತದೆ: ಮಧುಮೇಹಕ್ಕೆ ಸಕ್ಕರೆ ಅಂಶ ಮತ್ತು ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಾಗಿರುವುದರಿಂದ ಪಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಹಲವಾರು ಸಂಶೋಧನೆಗಳ ಪ್ರಕಾರ, ಪಪ್ಪಾಯಿ ಸಾರವು ವಾಸ್ತವವಾಗಿ ಟೈಪ್‌ 2 ಮಧುಮೇಹದ ಬೆಳವಣಿಗೆಯನ್ನು  ನಿಧಾನಗೊಳಿಸುತ್ತದೆ. ಪಪ್ಪಾಯವು ವಿಟಮಿನ್‌ ಸಿ ಜೊತೆಗೆ ಉರಿಯೂತ ಕಿಣ್ವಗಳನ್ನು ಹೊಂದಿದೆ. ಹೀಗಾಗಿ ಸಂಧಿವಾತದಿಂದ ಉಂಟಾಗುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ ಅಲ್ಲದೇ ಮಕ್ಕಳಿಗೆ ಹಾಲು ಉಣಿಸುವ ತಾಯಂದಿರಿಗೆ ಪಪ್ಪಾಯು ಶಕ್ತಿದಾಯಕ ಆಹಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!