Tuesday, May 30, 2023

Latest Posts

ಎರಡನೇ ಸುತ್ತಿನ ಉದ್ಯೋಗ ಕಡಿತ ಘೋಷಿಸಿದ ಅಮೇಜಾನ್:‌ 9,000 ಮಂದಿಗೆ ಗೇಟ್‌ ಪಾಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಕುಸಿತದ ಭೀತಿಯಿಂದಾಗಿ ಜಾಗತಿಕ ದಿಗ್ಗಜ ಕಂಪನಿಗಳು ಎರಡನೇ ಸುತ್ತಿನ ವಜಾಗೊಳಿಸುವಿಕೆಯನ್ನು ಘೋಷಿಸುತ್ತಿದ್ದು ಇತ್ತೀಚೆಗಷ್ಟೇ ಫೆಸ್ಬುಕ್‌ ಮಾತೃಸಂಸ್ಥೆ ಮೆಟಾ ಇತ್ತೋಚೆಗಷ್ಟೇ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗ ಕಡಿತ ಘೋಷಿಸಿದೆ. ಇದೀಗ ಆ ಸಾಲಿಗೆ ಇ-ಕಾಮರ್ಸ್‌ ದೈತ್ಯ ಅಮೇಜಾನ್‌ ಸೇರಿಕೊಂಡಿದ್ದು ಎರಡನೇ ಸುತ್ತಿನಲ್ಲಿ ಬರೋಬ್ಬರಿ 9 ಸಾವಿರ ಉದ್ಯೋಗ ಕಡಿತವನ್ನು ಘೋಷಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಗಣನೀಯ ಪ್ರಮಾಣದ ಸಿಬ್ಬಂದಿಯನ್ನು ಸೇರಿಸಿಕೊಂಡಿದೆ. ಆದರೆ ಅನಿಶ್ಚಿತ ಆರ್ಥಿಕತೆಯು ವೆಚ್ಚ ಮತ್ತು ಹೆಡ್‌ಕೌಂಟ್ ಕಡಿತವನ್ನು ಮಾಡಲು ಒತ್ತಾಯಿಸಿದೆ. ಉದ್ಯೋಗ ಕಡಿತವು ಕ್ಲೌಡ್ ಸೇವೆಗಳು, ಜಾಹೀರಾತು ಮತ್ತು ಟ್ವಿಚ್ ಘಟಕಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.

“ನಾವು ವಾಸಿಸುವ ಅನಿಶ್ಚಿತ ಆರ್ಥಿಕತೆ ಮತ್ತು ಮುಂದಿನ ದಿನಗಳಲ್ಲಿ ಇರುವ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ನಮ್ಮ ವೆಚ್ಚಗಳು ಮತ್ತು ಹೆಡ್‌ಕೌಂಟ್‌ನಲ್ಲಿ ಹೆಚ್ಚು ಸುವ್ಯವಸ್ಥಿತವಾಗಿರಲು ಆಯ್ಕೆ ಮಾಡಿಕೊಂಡಿದ್ದೇವೆ” ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಜಾಸ್ಸಿ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!