ಆತಂಕದಲ್ಲಿ ಸಲ್ಮಾನ್ ಖಾನ್‌ ಕುಟುಂಬಸ್ತರು, ಎಲ್ಲಾ ಕಾರ್ಯಕ್ರಮ ಕ್ಯಾನ್ಸಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದರೋಡೆಕೋರ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಸಲ್ಮಾನ್ ಮನೆ ಸುತ್ತ ಕೂಲಂಕಷವಾಗಿ ತಪಾಸಣೆ ನಡೆಸಲಾಗಿದೆ.

ಕಳೆದ ಎರಡು ದಿನದಿಂದ ಲಾರೆನ್ಸ್ ನಾನಾ ರೂಪದಲ್ಲಿ ಬೆದರಿಕೆ ಹಾಕುತ್ತಿದ್ದಾನೆ, ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದು, ಸಲ್ಮಾನ್ ಖಾನ್ ಕುಟುಂಬದವರು ಆತಂಕದಲ್ಲಿ ಸಮಯ ಕಳೆಯುತ್ತಿದ್ದಾರೆ.

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದ್ದು, ಸಾಕಷ್ಟು ಪ್ರಮೋಷನಲ್ ಈವೆಂಟ್‌ಗಳಿಗೆ ಸಲ್ಮಾನ್ ತೆರಳಬೇಕಿದ್ದು, ಸದ್ಯಕ್ಕೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಬಾಂದ್ರಾದಲ್ಲಿರುವ ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ತಪಾಸಣೆ ನಡೆಸಿದ್ದು, ಸೂಕ್ಷ್ಮವಾಗಿ ಸನ್ನಿವೇಶಗಳನ್ನು ಗಮನಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!