2023ರಲ್ಲಿಯೂ ಉದ್ಯೋಗ ಕಡಿತದ ಸೂಚನೆ ನೀಡಿದ ಅಮೇಜಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏರುತ್ತಿರುವ ಹಣದುಬ್ಬರ, ಆರ್ಥಿಕ ಕುಸಿದತ ಭೀತಿಯ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ಬೃಹತ್‌ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು ಮೊನ್ನೆಯಷ್ಟೇ ಐಟಿ ದೈತ್ಯ ಅಮೇಜಾನ್‌ 10 ಸಾವಿರ ಉದ್ಯೋಗಿಗಳನ್ನು ಹೊರಹಾಕಲು ಮುಂದಾಗಿದೆ. ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ತೆಗೆದುಹಾಕಿರುವ ಕಂಪನಿಯು ಈ ಉದ್ಯೋಗ ಕಡಿತವು 2023ರಲ್ಲಿಯೂ ಮುಂದುವರೆಯಬಹುದು ಎಂಬ ಸೂಚನೆ ನೀಡಿದೆ.

ಕಂಪನಿಯ ಉನ್ನತ ನಾಯಕರುಗಳು ಕಂಪನಿಯಲ್ಲಿ ಇನ್ನೂ ಹೊಂದಾಣಿಕೆಗಳನ್ನು ಮಾಡುತ್ತಿರುವುದರಿಂದ 2023ರ ಆರಂಭಿಕದಲ್ಲಿಯೂ ಕೆಲ ಉದ್ಯೋಗ ಕಡಿತಗಳು ಸಂಭವಿಸಬಹುದು ಎಂದು ಅಮೇಜಾನ್‌ ಸಿಇಒ ಆಂಡಿ ಜಾಸ್ಸಿ ಎಚ್ಚರಿಸಿದ್ದಾರೆ. ಅಮೆಜಾನ್‌ನ ವಾರ್ಷಿಕ ಯೋಜನೆ ಪ್ರಕ್ರಿಯೆಯು ಹೊಸ ವರ್ಷಕ್ಕೆ ವಿಸ್ತರಿಸುವುದರಿಂದ ಹೆಚ್ಚಿನ ವಜಾಗೊಳಿಸುವಿಕೆಗಳು ಬರಲಿವೆ ಎಂದು ಜಾಸ್ಸಿ ಹೇಳಿದ್ದಾರೆ. ಇತರ ಎಷ್ಟು ಪಾತ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಇನ್ನೂ ನಿಖರವಾಗಿ ತೀರ್ಮಾನಿಸಿಲ್ಲ ಅಂತಹ ನಿರ್ಧಾರಗಳನ್ನು 2023ರಲ್ಲಿ ಸಂಬಂಧಪಟ್ಟವರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ವ್ಯಾಪಕವಾದ ಸಾರ್ವಜನಿಕ ಅಥವಾ ಆಂತರಿಕ ಪ್ರಕಟಣೆಗಳನ್ನು ಮಾಡುವ ಮೊದಲು ಪ್ರಭಾವಿತ ಉದ್ಯೋಗಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು Amazon ಆದ್ಯತೆ ನೀಡುತ್ತದೆ ಎನ್ನಲಾಗಿದೆ. ಹಾಗಾಗಿ ಈಗಾಗಲೇ ಉದ್ಯೋಗ ಕಡಿತಗಳಿಂದ ಪ್ರಭಾವಿತಗೊಳ್ಳದವರಲ್ಲಿಯೂ ಈ ಘೋಷಣೆಗಳು ಉದ್ಯೋಗ ಕಡಿತದ ಭೀತಿ ಸೃಷ್ಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!