ಬೆಡ್‌ಶೀಟ್‌ನಲ್ಲಿ ಸುತ್ತಿದ ರೀತಿ ವೃದ್ಧನ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಚೀಲ ಮತ್ತು ಬೆಡ್‌ಶೀಟ್‌ನಲ್ಲಿ ಸುತ್ತಿದ ರೀತಿಯಲ್ಲಿ ವೃದ್ಧನ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳು ಆರಂಭವಾಗಿದೆ. ಜೆಪಿ ನಗರದ ಆರನೇ ಹಂತದ ಸಮೀಪ ಮೃತದೇಹ ಪತ್ತೆಯಾಗಿದ್ದು, ಮೃತರನ್ನು 67 ವರ್ಷದ ಬಾಲಸುಬ್ರಮಣಿಯನ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?
ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‌ಗೆ ಕರೆದುಕೊಂಡು ಹೋಗಿದ್ದ ಬಾಲಸುಬ್ರಮಣಿಯನ್ ನಾಪತ್ತೆಯಾಗಿದ್ದಾರೆ. ಹೊರಗೆ ಕೆಲಸ ಇದೆ ಎಂದು ಸೊಸೆಗೆ ಕರೆ ಮಾಡಿ ಹೇಳಿದ್ದು, ತದನಂತರ ಫೋನ್ ಸ್ವಿಚ್ ಆಫ್ ಆಗಿದ್ದು,ನಾಪತ್ತೆಯಾಗಿದ್ದಾರೆ. ಗಾಬರಿಯಾದ ಮಗ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಜೆಪಿನಗರದಲ್ಲಿ ವೃದ್ಧನ ಶವ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇಹದ ಮೇಲೆ ಯಾವುದೇ ಕಲೆಗಳಿಲ್ಲ. ಆದರೆ ಮುಖ ಹಾಗೂ ಕೈ ಕಾಲನ್ನು ಚೀಲದಲ್ಲಿ ಕಟ್ಟಲಾಗಿದೆ.
ಸಿಡಿಆರ್ ಪರಿಶೀಲಿಸಿದಾಗ ಮೃತ ವೃದ್ಧ ನಿರಂತರವಾಗಿ ಯಾವುದೋ ಮಹಿಳೆ ಜೊತೆ ಮಾತನಾಡುತ್ತಿದ್ದ ವಿಷಯ ಹೊರಬಂದಿದೆ. ಸಾರಕ್ಕಿ ಸಿಗ್ನಲ್ ಬಳಿ ಲಾಸ್ಟ್ ಲೊಕೇಷನ್ ನಿಂತಿದ್ದು, ಮಹಿಳೆ ಯಾರು ಎನ್ನುವುದು ತಿಳಿಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!