ಉದ್ಯೋಗ ಕಡಿತವೊಂದೇ ಅಲ್ಲ, ವೆಚ್ಚಕಡಿತಕ್ಕೆ ಕಚೇರಿಗಳನ್ನೂ ಮಾರಾಟ ಮಾಡುತ್ತಿದೆ ಅಮೇಜಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗಷ್ಟೇ 18 ಸಾವಿರ ಉದ್ಯೋಗ ಕಡಿತ ಘೋಷಿಸುವ ಮೂಲಕ ಉದ್ಯೋಗಿಗಳಿಗೆ ಶಾಕ್‌ ನೀಡಿದ್ದ ಇ-ಕಾಮರ್ಸ್‌ ದೈತ್ಯ ಅಮೇಜಾನ್‌ ಇದೀಗ ವೆಚ್ಚಕಡಿತಗೊಳಿಸಲು ತನ್ನ ಕಚೇರಿಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಆರ್ಥಿಕ ಸಂಕಷ್ಟದ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಹೊರ ಹಾಕುವುದಾಗಿ ಅಮೇಜಾನ್‌ ಈ ಹಿಂದೆ ಹೇಳಿತ್ತು. ಆರ್ಥಿಕ ಅನಿಶ್ಚಿತತೆಯಿಂದಾಗಿ ಮೊದಲು 10 ಸಾವಿರ ಉದ್ಯೋಗ ಕಡಿತ ಘೋಷಿಸಿದ್ದ ಅಮೇಜಾನ್‌ ನಂತರದಲ್ಲಿ ಈ ಸಂಖ್ಯೆಯನ್ನು 18 ಸಾವಿರಕ್ಕೆ ಏರಿಸಿತ್ತು. ಇದೀಗ ವೆಚ್ಚ ಕಡಿತದ ಭಾಗವಾಗಿ ಕಚೇರಿಗಳನ್ನೂ ಕೂಡ ಮಾರಾಟ ಮಾಡುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿಯೊಂದು ಹೇಳಿದೆ.

ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಅಮೆಜಾನ್ ಕ್ಯಾಲಿಫೋರ್ನಿಯಾದಲ್ಲಿ ಸುಮಾರು 16 ತಿಂಗಳ ಹಿಂದೆ ಖರೀದಿಸಿದ ಖಾಲಿ ಕಚೇರಿಯನ್ನು ಮಾರಾಟ ಮಾಡಲಿದೆ. ಅಕ್ಟೋಬರ್ 2021 ರಲ್ಲಿ ಭವಿಷ್ಯದ ಬಳಕೆಗಾಗಿ 123 ಮಿಲಿಯನ್‌ ಡಾಲರ್‌ ಗೆ ಅಮೇಜಾನ್ ಈ ಕಚೇರಿಯನ್ನು ಖರೀದಿಸಿತ್ತು. ಇದೀಗ ಈ ಕಚೇರಿಯನ್ನು ಮಾರಾಟ ಮಾಡಲು ಯೋಚಿಸಿದ್ದು ರಿಯಲ್ ಎಸ್ಟೇಟ್ ಡೆವಲಪರ್‌ನೊಂದಿಗೆ ಮಾತುಕತೆ ನಡೆಸುತ್ತಿದೆ.

ಈ ಕುರಿತು ಅಮೆಜಾನ್ ವಕ್ತಾರ ಸ್ಟೀವ್ ಕೆಲ್ಲಿ ಹೇಳಿಕೆ ನೀಡಿದ್ದು “ನಮ್ಮ ವ್ಯಾಪಾರ ಅಗತ್ಯಗಳನ್ನು ಪೂರೈಸಿಕೊಳ್ಳಲು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಈ ಪ್ರಯತ್ನದ ಭಾಗವಾಗಿ, ನಾವು ಮೆಟ್ರೋ ಕಾರ್ಪೊರೇಟ್ ಸೆಂಟರ್ ಸೈಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದೇವೆ. ” ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!