ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್ ಸ್ಲಾಮ್‌ಗೆ ಗುಡ್ ಬೈ ಹೇಳಿದ ಸಾನಿಯಾ-ಬೋಪಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ತಾರಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಓಪನ್ 2023 ಮಿಶ್ರ ಡಬಲ್ಸ್‌ನ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Sania-Bopanna vs Stefani-Matos, Australian Open Final Highlights:  Heartbreak for Sania; Indian pair goes down 6-7, 2-6 | Hindustan Timesಬ್ರೆಜಿಲ್‌ನ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ ಸಾನಿಯಾ ಬೋಪಣ್ಣ ಜೋಡಿ ಸೋಲು ಅನುಭವಿಸಿದೆ. ಟೆನಿಸ್ ಲೆಜೆಂಡ್ ಸಾನಿಯಾ ಮಿರ್ಜಾರ ವೃತ್ತಿ ಜೀವನದ ಕಡೆಯ ಗ್ರ್ಯಾಂಡ್ ಸ್ಲಾಮ್ ಪಂದ್ಯ ಇದಾಗಿತ್ತು.

ಕಡೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ವಿನ್ನರ್ ಪಟ್ಟಿಯೊಂದಿಗೆ ಪಂದ್ಯ ಗ್ರ್ಯಾಂಡ್ ಸ್ಲಾಮ್‌ಗೆ ಗುಡ್ ಬೈ ಹೇಳಬೇಕಿದ್ದ ಸಾನಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Watch: Sania Mirza's son, Rohan Bopanna's daughter celebrate victory after  parents cruised to Australian Open mixed doubles final | Sports News,The  Indian Expressಈ ಟೂರ್ನಿ ನಂತರ ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದು, ಫೆ.19ಕ್ಕೆ ಆರಂಭವಾಗುವ ಡಬ್ಲೂಟಿಎ 1000 ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ. ತದನಂತರ ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!