ಭಾರತದಲ್ಲಿ ಏರ್‌ಕಾರ್ಗೋ ಸೇವೆ ಆರಂಭಿಸಿದ ಅಮೇಜಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರಕು ಸಾಗಣೆ ಸೇವೆಗೆ ವೇಗ ನೀಡುವ ದೃಷ್ಟಿಯಿಂದ ಇ ಕಾಮರ್ಸ್‌ ದೈತ್ಯ ಅಮೇಜಾನ್‌ ಭಾರತದಲ್ಲಿ ಏರ್‌ ಕಾರ್ಗೋ ಸೇವೆ ಆರಂಭಿಸಿದೆ. ಸರಕುಗಳನ್ನು ವಾಯುಮಾರ್ಗದ ಮೂಲಕ ಸಾಗಾಟ ಮಾಡಲು ಇದು ಸಹಾಯಕವಾಗಲಿದೆ. ʼಅಮೇಜಾನ್‌ ಏರ್‌ʼ ಹೆಸರಿನಲ್ಲಿ ಸೇವೆಯು ಆರಂಭವಾಗಿದ್ದು ಆರಂಭಿಕವಾಗಿ ಎರಡು ವಿಮಾನಗಳು ಸರಕುಗಳನ್ನು ಸಾಗಾಟ ಮಾಡಲಿವೆ. ಈ ಹಿಂದೆ ಅಮೇಜಾನ್‌ ಅಮೆರಿಕ ಮತ್ತು ಯುರೋಪ್‌ ದೇಶಗಳಲ್ಲಿ ಈ ರೀತಿಯ ಏರ್‌ ಕಾರ್ಗೋ ಸೇವೆಗಳನ್ನು ಆರಂಭಿಸಿತ್ತು. ಇದೀಗ ಮೂರನೇ ದೇಶವಾಗಿ ಭಾರತದಲ್ಲಿ ಏರ್‌ ಕಾರ್ಗೋ ಸೇವೆ ಆರಂಭಿಸಲಾಗಿದೆ.

20,000 ಪ್ಯಾಕೇಜ್‌ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಎರಡು ಅಮೇಜಾನ್‌ ಏರ್‌ ವಿಮಾನಗಳನ್ನು ಕಂಪನಿ ಪರಿಚಯಿಸಿದ್ದು ಬೆಂಗಳೂರು ಮೂಲದ ಕ್ವಿಕ್‌ಜೆಟ್ ಕಾರ್ಗೋ ಏರ್‌ಲೈನ್ಸ್ ಇದನ್ನು ನಿರ್ವಹಿಸಲಿದೆ. ಆರಂಭದಲ್ಲಿ ಭಾರತದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ.

ಸರಕುಗಳನ್ನು ವಾಯು ಮಾರ್ಗದ ಮೂಲಕ ಸಾಗಣೆಯು ಸರಕು ಸೇವಾ ಕ್ಷೇತ್ರಕ್ಕೆ ಹೆಚ್ಚಿನ ವೇಗ ನೀಡಲಿದೆ. ಪ್ರಮುಖ ನಗರಗಳ ನಡುವೆ ವಾರಗಟ್ಟಲೇ ತೆಗೆದುಕೊಳ್ಳುತ್ತಿದ್ದ ಸಾಗಣೆಯ ಸಮಯವನ್ನು ಇದು ಗಂಟೆಗಳ ಲೆಕ್ಕದಲ್ಲಿ ನಡೆಸಲಿದೆ. ಇದು ಅತ್ಯಂತ ವೇಗದ ಸರಕು ಸಾಗಣೆಗೆ ಸಹಾಯಕವಾಗಲಿದ್ದು ವಿತರಣಾ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲು ಅನುವು ಮಾಡಿಕೊಡುತ್ತದೆ ಎಂದು ಅಮೇಜಾನ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!