ಪುನೀತ್ ರಾಜ್‌ಕುಮಾರ್ ಗೆ ವಿಶೇಷ ಗೌರವ ನೀಡಲು ಸಜ್ಜಾಗುತ್ತಿದೆ ಅಮೆಜಾನ್‌ ಪ್ರೈಮ್ ಸಂಸ್ಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸುವ ಒಂದಲ್ಲ ಒಂದು ಕೆಲಸಗಳು ರಾಜ್ಯದಲ್ಲಿ ಅಥವಾ ನಾನಾ ಕಡೆಗಳಲ್ಲಿ ನಡೆಯುತ್ತಿವೆ. ಅದೇ ರೀತಿ ಇದೀಗ ಅಮೆಜಾನ್‌ ಪ್ರೈಮ್ ಸಂಸ್ಥೆ ಕೂಡ ಅಪ್ಪುಗೆ ವಿಶೇಷ ಗೌರವ ನೀಡಲು ಸಜ್ಜಾಗುತ್ತಿದೆ.
ಹೌದು, ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಹಾಗೂ ಪಿಆರ್​ಕೆ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿದ್ದ ಕವಲುದಾರಿ, ಮಾಯಾಬಜಾರ್, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳನ್ನು ಫೆ. 1ರಿಂದ 28ರವರೆಗೆ ಉಚಿತವಾಗಿ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರ ಮಾಡುವ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ. ಇದರ ಜೊತೆ ಮೂರು ಹೊಸ‌ ಸಿನಿಮಾಗಳ ಬಿಡುಗಡೆ ಮಾಡುವುದಾಗಿ ಹೇಳಿದೆ.
ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿರುವ ಹೊಸ ಸಿನಿಮಾಗಳಾದ ಒನ್‌ ಕಟ್ ಟು ಕಟ್, ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್‌ ದಿ ಮ್ಯಾಚ್ ಸಿನಿಮಾಗಳನ್ನು ನೇರವಾಗಿ ಅಮೆಜಾನ್‌ ಪ್ರೈಮ್‌ನಲ್ಲಿ ರಿಲೀಸ್ ಮಾಡಲಾಗುವುದು.
ಈಗಾಗಲೇ ಅಪ್ಪು ನಿಧನ ಬಳಿಕ ಪಿಆರ್‌ಕೆ ಯ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದಾರೆ. ಅಪ್ಪು ಕನಸನ್ನು ನನಸು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!