ಭಾರತೀಯ ಸಂಪ್ರದಾಯದಂತೆ ಹೊಸ ಕಾರಿಗೆ ಪೂಜೆ ಮಾಡಿ ಸ್ವಾಗತಿಸಿದ ಸೌತ್ ಕೊರಿಯಾ ರಾಯಭಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೂಜೆ ಪುನಸ್ಕಾರಗಳಲ್ಲಿ ಭಾರತೀಯರು ಮುಂದೆ. ಅದು ಮನೆಯಾಗಲೀ ಅಥವಾ ಹೊಸ ಕಾರು, ವಾಹನ ಖರೀದಿಸಿದರೆ ಆಗಲಿ . ಪೂಜೆ ಮಾಡುತ್ತಾರೆ.

ಆದ್ರೆ ಇದೀಗ ಸೌತ್ ಕೊರಿಯಾ ರಾಯಭಾರಿ ಹೊಚ್ಚ ಹೊಸ ಹ್ಯುಂಡೈ ಜೆನಿಸಿಸ್ GV80 ಕಾರನ್ನು ಹಿಂದು ಸಂಪ್ರದಾಯದಂತೆ ಪೂಜೆ ಮಾಡಿ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸೌತ್ ಕೊರಿಯಾ ರಾಯಭಾರಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಚಾಂಗ್ ಜೆ ಬಾಕ್‌ಗೆ ಹೊಸ ಕಾರು ಬಂದಿದೆ. ರಾಯಭಾರಿಗಳ ಓಡಾಟಕ್ಕೆ ನೀಡಿರುವ ಅಧಿಕೃತ ಕಾರು ಇದಾಗಿದೆ. ಹೊಸ ಕಾರು ಡೆಲಿವರಿ ದಿನದಂದು ಚಾಂಗ್ ಜೆ ಬಾಕ್‌ ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡಿಸಿದ್ದಾರೆ.

ಇತ್ತ ಸೌತ್ ಕೊರಿಯಾ ರಾಯಭಾರ ಅಧಿಕಾರಿ ಚಾಂಗ್ ಜೆ ಬಾಕ್‌, ಪೂಜೆಗಾಗಿ ಅರ್ಚಕರನ್ನು ಕರೆಸಿದ್ದಾರೆ. ಬಳಿಕ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗಿದೆ. ಕಾಯಿ ಒಡೆದು, ಆರತಿ ಬೆಳಗಲಾಗಿದೆ. ಬಳಿಕ ಕುಂಕುಮವಿಟ್ಟು ಹೊಸ ಕಾರಿಗೆ ಪೂಜೆ ಮಾಡಿಸಿದ್ದಾರೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಸೌತ್ ಕೊರಿಯಾ ರಾಯಭಾರ ಅಧಿಕಾರಿ, ಹೊಸ ಹ್ಯುಂಡೈ ಜೆನಿಸಿಸ್ GV80 ಕಾರು ನಮ್ಮ ರಾಯಭಾರ ಕುಟುಂಬ ಸೇರಿದೆ. ಇದು ಸೌತ್ ಕೊರಿಯಾ ರಾಯಭಾರ ಅಧಿಕಾರಿಗಳ ಅಧಿಕೃತ ಕಾರು. ಕಾರಿಗೆ ಪೂಜೆ ಮಾಡಲಾಗಿದೆ. ಹೊಸ ಪಯಣದಲ್ಲಿ ಹೊಸ ಸಾರಥಿ ನಮಗೆ ಸನ್ಮಂಗಳ ನೀಡಲಿ ಎಂದು ಚಾಂಗ್ ಜೆ ಬಾಕ್‌ ಹೇಳಿದ್ದಾರೆ.

ಸೌತ್ ಕೊರಿಯಾ ರಾಯಭಾರ ಅಧಿಕಾರಿಗಳ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡಿಸಿ ಜನರ ಮನಸ್ಸು ಗೆದ್ದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!