ಹೊಸದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಬಾಳೆಲೆಯಲ್ಲಿ ಜಾನುವಾರು ಒಂದರ ಮೇಲೆ ದಾಳಿ ನಡೆಸಿದೆ.
ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ದೇವನೂರು ಗ್ರಾಮದ ರಾಜಾಪುರ ಎಂಬಲ್ಲಿ ಗುರುವಾರ ಮಧ್ಯಾಹ್ನ ಪಾರುವಂಗಡ ಪ್ರವೀಣ್ ಅವರಿಗೆ ಸೇರಿದ ಎಮ್ಮೆಯ ಮೇಲೆ ದಾಳಿ ನಡೆಸಿ ಆಹುತಿ ಪಡೆದಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು, ರೈತ ಸಂಘ ಪ್ರಮುಖರು ಭೇಟಿ ನೀಡಿದ್ದು, ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನ್ ಅಳವಡಿಸಲಾಗಿದೆ