January22, 2026
Thursday, January 22, 2026
spot_img

ದೇವರ ಸನ್ನಿಧಾನಕ್ಕೆ ಆಂಬುಲೆನ್ಸ್ ಕಡ್ಡಾಯ: ಶಬರಿಮಲೆ ಯಾತ್ರಿಗಳ ಸಾವಿನ ಬಗ್ಗೆ ಹೈಕೋರ್ಟ್‌ನ ಕಳಕಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಹೈಕೋರ್ಟ್ ಶಬರಿಮಲೆ ಸನ್ನಿಧಾನಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ದೇಶನ ನೀಡಿದೆ. ಇನ್ನು ಮುಂದೆ ಶಬರಿಮಲೆ ಯಾತ್ರೆಯ ವೇಳೆ ಭಕ್ತರು ಮೃತಪಟ್ಟರೆ, ಅವರ ದೇಹವನ್ನು ಸ್ಟ್ರಚರ್‌ನಲ್ಲಿ ಹೊತ್ತು ಪಂಬಾಗೆ ತರುವಂತಿಲ್ಲ. ಬದಲಾಗಿ, ಮೃತದೇಹವನ್ನು ಕಡ್ಡಾಯವಾಗಿ ಆಂಬುಲೆನ್ಸ್‌ನಲ್ಲೇ ಸಾಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಶಬರಿಮಲೆ ಬೆಟ್ಟವನ್ನು ಏರುತ್ತಿರುವ ಇತರ ಯಾತ್ರಾರ್ಥಿಗಳ ಮೇಲೆ ಈ ಘಟನೆಗಳು ಮಾನಸಿಕವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಕೋರ್ಟ್ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದೆ. ಸ್ಟ್ರೆಚರ್‌ನಲ್ಲಿ ಮೃತದೇಹವನ್ನು ಹೊತ್ತು ತರುವುದನ್ನು ನೋಡಿದರೆ, ಶಬರಿಮಲೆ ಹತ್ತುವ ಭಕ್ತರ ಮನೋವೇದನೆ ಹೆಚ್ಚಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಕಾರಣಕ್ಕಾಗಿ, ಸಾಗಾಟದಲ್ಲಿ ಗೌರವಯುತ ವಿಧಾನವನ್ನು ಅನುಸರಿಸುವುದು ಸೂಕ್ತ.

ಈ ವರ್ಷದ ಯಾತ್ರಾ ಸೀಸನ್‌ನ ಮೊದಲ 8 ದಿನಗಳಲ್ಲಿ ಈಗಾಗಲೇ 8 ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷ ಈ ಸೀಸನ್‌ನಲ್ಲಿ 150ಕ್ಕೂ ಹೆಚ್ಚು ಭಕ್ತರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ. ಅದರಲ್ಲಿ ಸುಮಾರು 40-42 ಭಕ್ತರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ಗಮನಿಸಿ, ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ.

ಶಬರಿಮಲೆಗೆ ಬರುವ ಯಾತ್ರಾರ್ಥಿಗಳಿಗೆ ದಾರಿಯಲ್ಲಿ ಸೂಕ್ತ ವಿಶ್ರಾಂತಿ ವ್ಯವಸ್ಥೆಗಳನ್ನು ಕಲ್ಪಿಸುವಂತೆ ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

Must Read