ಕಿಚ್ಚನ ‘ಮ್ಯಾಕ್ಸ್’ ಚಿತ್ರದ ಹೆಸರಲ್ಲಿ ಆ್ಯಂಬುಲೆನ್ಸ್ ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೌನವಾಗಿ ತಮ್ಮತ್ತ ಮುಖಮಾಡಿದವರಿಗೆ ಸಹಾಯಹಸ್ತ ಚಾಚಿದವರು. ಅವರ ಹೆಸರಿನಲ್ಲಿ ಈಗಾಗಲೇ ಚಾರಿಟಬಲ್ ಫೌಂಡೇಶನ್ ಮೂಲಕ ಅವರು ನೀಡಿದ ಕೊಡುಗೆ ಎಲ್ಲರಿಗೂ ತಲುಪುತ್ತಿದೆ. ಅವರು ಹಳ್ಳಿಗಳು ಮತ್ತು ಶಾಲೆಗಳನ್ನು ದತ್ತು ತೆಗೆದುಕೊಂಡು ಬಡವರಿಗೆ ಸಹಾಯ ಮಾಡಿದ್ದಾರೆ. ಕಿಚ್ಚ ಹೆಸರಿನ ಟ್ರಸ್ಟ್ ಜೊತೆಗೆ, ಅವರ ಅಭಿಮಾನಿಗಳು ಸ್ಥಾಪಿಸಿದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಾವಿರಾರು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ.

ಕಿಚ್ಚ ಸುದೀಪ್ ಅಭಿಮಾನಿ ಸ್ಥಾಪಿಸಿದ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಮಾಜ ಸೇವೆಗೆ ಮುಡಿಪಾಗಿದೆ. ಆದ್ದರಿಂದ ಟ್ರಸ್ಟ್ ಈಗ “ಮ್ಯಾಕ್ಸ್” ಎಂಬ ಹೆಸರಿನ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಸುದೀಪ್ ‘ಮ್ಯಾಕ್ಸ್’ ಹೆಸರಿನ ಆಂಬುಲೆನ್ಸ್ ಅನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದರು.

ಅಂದಹಾಗೆ, ಕಿಚ್ಚ ಅಭಿನಯದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಮ್ಯಾಕ್ಸ್ ಕೂಡ ಒಂದು. ಈ ಚಿತ್ರದ ಫಸ್ಟ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಸುದೀಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಮ್ಯಾಕ್ಸ್” ಚಿತ್ರದ ಕ್ಲೈಮ್ಯಾಕ್ಸ್‌ನ ರೀಶೂಟ್ ಆಗಿದೆ, ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!