Wednesday, February 21, 2024

HEALTH | ಬಿಸ್ಕೆಟ್‌ಗೆ ಹಾಲು ಹಾಕಿ ಮಕ್ಕಳಿಗೆ ತಿನ್ನಿಸ್ತೀರಾ? ಮಿಸ್ ಮಾಡದೇ ಓದಿ..

ಆರು ತಿಂಗಳವರೆಗೂ ಸ್ಟ್ರಿಕ್ಟ್ ಆಗಿ ತಾಯಿಯ ಹಾಲನ್ನೇ ಮಕ್ಕಳಿಗೆ ನೀಡಬೇಕು, ಈ ಬಗ್ಗೆ ಎಲ್ಲ ತಾಯಂದಿರಿಗೂ ಅರಿವಿರುತ್ತದೆ. ಆರು ತಿಂಗಳ ನಂತರ ಏಕದಳ ಧಾನ್ಯ, ವರ್ಷದ ನಂತರ ದ್ವಿದಳ ಧಾನ್ಯ ಹೀಗೆ ಮಕ್ಕಳ ಡಯಟ್ ನಿರ್ಧಾರ ಮಾಡಬೇಕು.

ಎಷ್ಟೋ ತಾಯಂದಿರು ಅಜ್ಜಿಯಂದಿರು ಈಗಲೂ ಮಕ್ಕಳಿಗೆ ಬಿಸ್ಕೆಟ್‌ನ್ನು ನೀಡ್ತಾರೆ. ಹಾಲಿನಲ್ಲಿ ಬಿಸ್ಕೆಟ್ ಕರಗಿಸಿ ಮಕ್ಕಳಿಗೆ ತಿನ್ನಿಸ್ತಾರೆ. ಮಕ್ಕಳು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ ಕೂಡ.

ಆದರೆ ಮಕ್ಕಳಿಗೆ ಬಿಸ್ಟೆಕ್ ಕೊಡಬಹುದಾ? ಏನಿದೆ ಅದರಲ್ಲಿ?
ಯಾವುದೇ ಬಿಸ್ಕೆಟ್ ಖರೀದಿಗೆ ಮುನ್ನ ಅದರ ಹಿಂಬದಿಯಲ್ಲಿ Ingredients ಎಂದು ಬರೆದಿರುತ್ತದೆ. ಅದನ್ನೊಮ್ಮೆ ಚೆಕ್ ಮಾಡಿ. ಬಿಸ್ಕೆಟ್ ಮಾಡಲು ಬಳಸುವ ಹಿಟ್ಟು ಮೈದಾ(Refined wheat flour) , ಇದರಲ್ಲಿ ಯಾವುದೇ ನ್ಯೂಟ್ರಿಯಂಟ್ಸ್ ಇಲ್ಲ ಹಾಗೂ ದೇಹಕ್ಕೆ ಒಳ್ಳೆಯದೂ ಅಲ್ಲ. ಇನ್ನು ಸಕ್ಕರೆ ಮತ್ತೊಂದು ಮುಖ್ಯವಾದ ಸಾಮಾಗ್ರಿ, ಎರಡು ವರ್ಷದವರೆಗೆ ಮಕ್ಕಳಿಗೆ ಸಕ್ಕರೆ ನೀಡುವಂತಿಲ್ಲ. ಆದರೆ ಬಿಸ್ಕೆಟ್‌ನಲ್ಲಿ 50  ಗ್ರಾಂಗಟ್ಟಲೆ ಸಕ್ಕರೆ ಇದೆ. ಇಷ್ಟೇ ಅಲ್ಲ ಪಾಮ್ ಆಯಿಲ್ ಬಳಕೆ ಮಾಡಲಾಗುತ್ತದೆ. ಜೊತೆಗೆ ಆರ್ಟಿಫಿಶಿಯಲ್ ಬಣ್ಣಗಳು ಹಾಗೂ ಕೆಮಿಕಲ್ಸ್ ಇರುತ್ತದೆ.

ಇಂಥಾ ಆಹಾರವನ್ನು ಮಕ್ಕಳಿಗೆ ಕೊಡ್ತೀರಾ? ಮನೆಯಲ್ಲೇ ತಯಾರಿಸಿದ ರಾಗಿ ಸರಿ, ಹಣ್ಣಿನ ರಸ, ಬೇಯಿಸಿದ ತರಕಾರಿ ಮಕ್ಕಳಿಗೆ ಉತ್ತಮ ಆಹಾರವಾಗಿದೆ. ಸುಮ್ನೆ ಯೋಚಿಸಿ, ನೀವು ಚಿಕ್ಕವರಿದ್ದಾಗ ಇಷ್ಟೆಲ್ಲಾ ಜಂಕ್ ಫುಡ್ ಸಿಗುತ್ತಿತ್ತಾ? ಉತ್ತಮ ಆಹಾರ ತಿಂದು ಬೆಳೆದ ನೀವು ಈಗಲೂ ಆರೋಗ್ಯವಾಗಿದ್ದೀರಿ, ಮತ್ಯಾಕೆ ಮಕ್ಕಳಿಗೆ ಜಂಕ್ ಫುಡ್ ಜೊತೆಗಿನ ಫೌಂಡೇಷನ್ ಹಾಕ್ತೀರಿ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!