ಅಮೆರಿಕಾ ರೂಪದರ್ಶಿ ಕೊಲೆ ಪ್ರಕರಣ: ಆರೋಪಿಗಾಗಿ ಪ್ರೇಗ್​ಗೆ ತೆರಳಿದ ಮಹಾರಾಷ್ಟ್ರ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

19 ವರ್ಷಗಳ ಹಿಂದೆ ನಡೆದ ಅಮೆರಿಕಾ ರೂಪದರ್ಶಿ ಕೊಲೆ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಂಡ ಅಮೆರಿಕಾ ನಿವಾಸಿ, ಪ್ರಕರಣದ ಆರೋಪಿಗಳಾದ ಪ್ರಾಣೇಶ್ ದೇಸಾಯಿ ಮತ್ತು ಅವನ ಸ್ನೇಹಿತ ವಿಪುಲ್ ಪಟೇಲ್ ವಿರುದ್ಧ ಬಾಂಬೆ ಹೈಕೋರ್ಟ್​ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಈ ಹಿನ್ನೆಲೆ ಅವರಿಬ್ಬರನ್ನು ಬಂಧಿಸಲು ಮಹಾರಾಷ್ಟ್ರದ ಪೊಲೀಸ್​ ತಂಡ ಜೆಕ್​ ಗಣರಾಜ್ಯದ ಪ್ರೇಗ್​ಗೆ ತೆರಳಿದೆ.

2003ರಲ್ಲಿ ಅಮೆರಿಕಾ ಮಾಡೆಲ್​ ಲಿಯೋನಾ ಸ್ವಿಂಡರ್​ಸ್ಕಿ (33) ಕೊಲೆಯಾಗಿತ್ತು. ಪ್ರಾಣೇಶ್​ ದೇಸಾಯಿ ಮತ್ತು ಸ್ವಿಂಡರ್‌ಸ್ಕಿ ಅವರು ಸಂಬಂಧದಲ್ಲಿದ್ದರು. ಮೇ 2003ರಲ್ಲಿ ವಿವಾಹವಾಗಬೇಕಿತ್ತು. ಫೆಬ್ರವರಿ 7, 2003ರಂದು ಇಬ್ಬರೂ ನೆರೆಯ ಮುಂಬೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಮಾಡೆಲ್ ಕಾಣೆಯಾಗಿದ್ದರು. ಮರುದಿನ ಥಾಣೆ ಜಿಲ್ಲೆಯ ಕಾಶಿಮಿರಾ ಪ್ರದೇಶದ ಹೆದ್ದಾರಿಯಲ್ಲಿ ಆಕೆಯ ಶವ ಪತ್ತೆಯಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಬಾಂಬೆ ಪೊಲೀಸರಿಗೆ ಪ್ರಾಣೇಶ್​ ದೇಸಾಯಿ ತನ್ನ ಸ್ನೇಹಿತ ಪಟೇಲ್‌ನ ಸಹಾಯ ಪಡೆದು ಮಾಡೆಲ್‌ಗೆ ಸೇರಿದ 1 ಮಿಲಿಯನ್ ಯುಎಸ್ ಡಾಲರ್ ವಿಮಾ ಮೊತ್ತವನ್ನು ಕ್ಲೇಮ್ ಮಾಡಲು ಸ್ವಿಂಡರ್​ಸ್ಕಿಯನ್ನು ಕೊಲೆ ಮಾಡಿದ್ದರು ತಿಳಿದುಬಂದಿತ್ತು.

ಬಳಿಕ ಗುಜರಾತ್‌ನ ವಡೋದರಾದಲ್ಲಿ ಪ್ರಾಣೇಶ್​ ದೇಸಾಯಿಯನ್ನು ಬಂಧಿಸಿದ್ದರು. ಇನ್ನೊಬ್ಬ ಆರೋಪಿ ಪಟೇಲ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಪಟೇಲ್​ ಜೆಕ್​ ಗಣರಾಜ್ಯದ ಪ್ರೇಗ್​ನಲ್ಲಿ ಇದ್ದಾನೆ ಎಂದು ಮಾಹಿತಿ ತಿಳಿದು ಬಂದಿತ್ತು. ಇಂಟರ್‌ಪೋಲ್ ಪಟೇಲ್​ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಮಹಾರಾಷ್ಟ್ರ ಪೊಲೀಸರು ಇದೀಗ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಇಂಟರ್‌ಪೋಲ್‌ನೊಂದಿಗೆ ಸಮನ್ವಯ ಸಾಧಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಪ್ರೇಗ್‌ಗೆ ತೆರಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!