ಕಛೇರಿಯಲ್ಲೇ ಕುಡಿತ: ಕಾನ್ಪುರದ ಇಂಜಿನಿಯರ್‌ ಅಮಾನತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾನ್ಪುರ ವಿದ್ಯುತ್ ಸರಬರಾಜು ಕಂಪನಿ (ಕೆಸ್ಕೋ) ಸಹಾಯಕ ಇಂಜಿನಿಯರ್ ಒಬ್ಬ ತನ್ನ ಕಛೇರಿಯಲ್ಲೇ ಕೂತು ಮದ್ಯಪಾನ ಸೇವಿಸುತ್ತಿರುವ ಘಟನೆ ನಡೆದಿದ್ದು ಆತನನ್ನು ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ.
ಕಾನ್ಪುರದ ಜರೀಬ್ ಚೌಕಿಯಲ್ಲಿರುವ ಕೆಸ್ಕೋದ ಮುಖ್ಯ ಇಂಜಿನಿಯರ್‌ ರವರ ಕಛೇರಿಯಲ್ಲಿ ಕೂತು ಬಿಯರ್‌ ಕುಡಿಯುತ್ತಿರುವ ವೀಡಿಯೋವೊಂದು ವೈರಲ್‌ ಆಗದೆ. ವೈರಲ್‌ ಆಗುತ್ತಿದ್ದಂತೆ ಕೆಸ್ಕೋ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಧಿಂಗ್ರಾ ಅವರು ಸಹಾಯಕ ಎಂಜಿನಿಯರ್ ಅನ್ನು ಅಮಾನತುಗೊಳಿಸಿದ್ದಾರೆ ಮತ್ತು ವೀಡಿಯೊ ತನಿಖೆಗಾಗಿ ಮೂರು ಸದಸ್ಯರ ತಂಡವನ್ನು ರಚಿಸಿದ್ದಾರೆ. ಸಹಾಯಕ ಇಂಜಿನಿಯರನ್ನು ತುಷಾರ್ ಕಾಂತ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!