Wednesday, March 29, 2023

Latest Posts

VIRAL VIDEO| ಕಮಲಾ ಹ್ಯಾರಿಸ್ ಪತಿಗೆ‌ ಮುತ್ತು ಕೊಟ್ಟ ʻಬಿಡೆನ್ʼ ಪತ್ನಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಪತ್ನಿ ಜಿಲ್ ಬಿಡೆನ್ ಅವರು ‘ಲಿಪ್ ಕಿಸ್’ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಅಪರಿಚಿತರನ್ನು ಚುಂಬಿಸುವುದು ಕೂಡಾ ಸಾಮಾನ್ಯ ಆದರೂ ಅಮೆರಿಕದ ಅಧ್ಯಕ್ಷರ ಪತ್ನಿ ಉಪಾಧ್ಯಕ್ಷರ ಪತಿಗೆ ‘ಲಿಪ್ ಕಿಸ್’ ನೀಡಿರುವುದು ಕುತೂಹಲ ಮೂಡಿಸಿದೆ. ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಸಭೆಯಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದೆ.

ಈ ವೇಳೆ ಅಲ್ಲಿಗೆ ಬಂದ ಜಿಲ್ ಬಿಡೆನ್, ಅಲ್ಲಿದ್ದ ಕಮಲಾ ಹ್ಯಾರಿಸ್ ಅವರ ಪತಿ ಡಗ್ಲಾಸ್ ಎಂಹಾಫ್ ಅವರನ್ನು ಚುಂಬಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅಮೆರಿಕದ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!