ತವಾಂಗ್‌ನಲ್ಲಿ ಭಾರತ-ಚೀನಾ ನಡುವಿನ ಘರ್ಷಣೆ ಕುರಿತು ಶ್ವೇತಭವನ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಕುರಿತು ಶ್ವೇತಭವನ ಪ್ರತಿಕ್ರಿಯೆ ನೀಡಿದೆ.  ಗಡಿಯಲ್ಲಿ ಉದ್ವಿಗ್ನ ವಾತಾವೃಣ ನಿರ್ಮಾಣವಾಗಿದ್ದು, ಈ ಕುರಿತು ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ಪ್ರಯತ್ನಗಳನ್ನು ಧೈರ್ಯವಾಗಿ ಎದುರಿಸಲಾಗುವುದು ಎಂದು ಹೇಳಿದ್ದಾರೆ. ಉಭಯ ದೇಶಗಳ ಗಡಿಯಲ್ಲಿ ಸೈನಿಕರ ನಡುವಿನ ಘರ್ಷಣೆಗೆ ಅಮೆರಿಕ ಪ್ರತಿಕ್ರಿಯಿಸಿದೆ. ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರಿನ್ ಜೀನ್-ಪಿಯರ್ ಈ ವಿಷಯದ ಕುರಿತು ಮಾತನಾಡಿದರು.

ತವಾಂಗ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಯುಎಸ್ ಪರಿಶೀಲಿಸುತ್ತಿದೆ ಎಂದು ಕರಿನ್ ಜೀನ್-ಪಿಯರ್ ಹೇಳಿದ್ದಾರೆ. ವಿವಾದಿತ ಗಡಿಗಳನ್ನು ಚರ್ಚಿಸಲು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಮಾರ್ಗಗಳನ್ನು ಬಳಸುವಂತೆ ಎರಡೂ ಕಡೆಯವರಿಗೆ ಸಲಹೆ ನೀಡಿದರು. ಉಭಯ ಪಡೆಗಳು ತ್ವರಿತವಾಗಿ ಸಂಘರ್ಷದಿಂದ ಹಿಂದೆ ಸರಿದಿರುವುದು ಸಂತಸ ತಂದಿದೆ ಎಂದು ಪ್ರಕಟಣೆ ಹೊರಡಿಸಿದೆ.

ಡಿಸೆಂಬರ್ 9 ರಂದು, ಶುಕ್ರವಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ, ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಎರಡೂ ಕಡೆಯ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾರತದ ಭೂಪ್ರದೇಶಕ್ಕೆ ನುಗ್ಗಲು ಯತ್ನಿಸಿದ ಚೀನಾ ಪಡೆಗಳಿಗೆ ಭಾರತೀಯ ಪಡೆಗಳು ದಿಟ್ಟ ಉತ್ತರ ನೀಡಿವೆ. ಈ ಘರ್ಷಣೆಯಲ್ಲಿ ಗಾಯಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಭಾರತೀಯ ಸೈನಿಕರ ಸಂಖ್ಯೆಗಿಂತ ಹೆಚ್ಚು ಎಂದು ತಿಳಿದುಬಂದಿದೆ. ಗಾಯಗೊಂಡ ಭಾರತೀಯ ಯೋಧರಿಗೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!