ಯುಎಸ್ ಡ್ರೋನ್ ಮೇಲೆ ಇಂಧನ ಸುರಿದ ರಷ್ಯಾದ ಜೆಟ್, ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಯುದ್ಧ ವಿಮಾನ ಮತ್ತು ಅಮೆರಿಕ ಡ್ರೋನ್ ನಡುವಿನ ಎಕ್ಸ್‌ಕ್ಲೂಸೀವ್ ವಿಡಿಯೋವೊಂದನ್ನಿ ಅಮರಿಕ ಹಂಚಿಕೊಂಡಿದೆ.

ಮಾರ್ಚ್ 14 ರಂದು ಕಪ್ಪು ಸಮುದ್ರದ ಮೇಲೆ ಯುಎಸ್ ಡ್ರೋನ್ ಮತ್ತು ರಷ್ಯಾದ ಯುದ್ಧ ವಿಮಾನ ಮುಖಾಮುಖಿಯಾಗಿತ್ತು. ಈ ವೇಳೆ ರಷ್ಯಾದ ಜೆಟ್ ಇಂಧನ ಸುರಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ವಿಡಿಯೋವನ್ನು ಅಮೆರಿಕ ಬಿಡುಗಡೆ ಮಾಡಿದೆ.

 

ಈ ಘರ್ಷಣೆಯಲ್ಲಿ ಅಮೆರಿಕ ಡ್ರೋನ್ ಸಮುದ್ರಕ್ಕೆ ಬಿದ್ದಿತ್ತು. ಈ ಬಗ್ಗೆ ಅಮೆರಿಕ ಮಾತನಾಡಿದ್ದು, ರಷ್ಯಾದ್ದು ಅಸುರಕ್ಷಿತ ಹಾಗೂ ವೃತ್ತಿಪರವಲ್ಲದ ನಡೆ ಎಂದು ಆರೋಪಿಸಿತ್ತು. ಜೊತೆಗೆ ತಮ್ಮ ಡ್ರೋನ್ ಬೇರೆ ಯಾವುದೇ ದೇಶದ ಗಡಿಯನ್ನು ಉಲ್ಲಂಘಿಸಿರಲಿಲ್ಲ ಎಂದು ಯುಎಸ್ ಹೇಳಿದೆ.

ನಾವು ಯಾವುದೇ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ, ಅಮೆರಿಕ ಡ್ರೋನ್ ನಾಶಮಾಡಿಲ್ಲ. ಡ್ರೋನ್ ಯುದ್ಧವನ್ನು ಅಭ್ಯಾಸ ಮಾಡುತ್ತಿದ್ದಾಗ, ನೀರಿನ ಮೇಲ್ಮೈಗೆ ಡಿಕ್ಕಿ ಹೊಡೆದು ಬಿದ್ದಿದೆ ಎಂದು ರಷ್ಯಾ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!