Friday, March 31, 2023

Latest Posts

ಆಸ್ಕರ್‌ನೊಂದಿಗೆ ಹೈದರಾಬಾದ್‌ಗೆ ಎಂಟ್ರಿಕೊಟ್ಟ RRR ತಂಡಕ್ಕೆ ಭರ್ಜರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿ ಮುಡಿಗೇರಿಸಿಕೊಂಡು ತವರಿಗೆ ಕಾಲಿಟ್ಟ ಆರ್‌ಆರ್‌ಆರ್‌ ತಂಡಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಎನ್ಟಿಆರ್, ರಾಮ್ ಚರಣ್ ಜೊತೆಗಿನ ಬಹುತಾರಾಗಣದ ಈ ಚಿತ್ರ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ.

ಆರ್‌ಆರ್‌ಆರ್ ಅನ್ನು ಅಧಿಕೃತವಾಗಿ ಆಸ್ಕರ್‌ಗೆ ಕಳುಹಿಸದಿದ್ದರೂ, ರಾಜಮೌಳಿ ನಿರಾಶೆಗೊಳ್ಳದೆ ತನ್ನ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ಆಸ್ಕರ್‌ನಲ್ಲಿ ಸ್ಥಾನ ಪಡೆಯಲು ಹೋರಾಡಿದರು. ಆರ್‌ಆರ್‌ಆರ್‌ನ ನಾಟು ನಾಟು ಹಾಡು ಜಗತ್ತನ್ನು ಆವರಿಸಿಕೊಂಡಿತು.  ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ ಮುಡಿಗೇರಿಸಿಕೊಂಡಿತು.

ರಾಜಮೌಳಿ ಮತ್ತು ಕೀರವಾಣಿ ಆಸ್ಕರ್ ಪ್ರಶಸ್ತಿಯೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದರು. ಇಂದು ಮುಂಜಾನೆ 3 ಗಂಟೆಗೆ ಹೈದರಾಬಾದ್‌ಗೆ ಬಂದಿಳಿದ ಆರ್‌ಆರ್‌ಆರ್ ತಂಡಕ್ಕೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಗಾಯಕ ಕಾಲಭೈರವ ಮಾತನಾಡಿ, ”ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ವೇದಿಕೆ ಮೇಲೆ ಹಾಡಿನ ಪ್ರದರ್ಶನ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು ಮತ್ತು ರಾಜಮೌಳಿ ‘ಜೈ ಹಿಂದ್’ ಎಂಬ ಒಂದೇ ಪದದಿಂದ ಎಲ್ಲರ ಹೃದಯವನ್ನು ಕದ್ದಿದ್ದಾರೆ. ಏತನ್ಮಧ್ಯೆ, ಸ್ಪೀಕರ್ ಶಿಪ್ ಶೃಂಗಸಭೆಯ ಇಂಡಿಯಾ ಟುಡೆ ಕಾನ್ಕ್ಲೇವ್ ಕಾರ್ಯಕ್ರಮದ ಕಾರಣ ರಾಮ ಚರಣ್ ನೇರವಾಗಿ ದೆಹಲಿ ತಲುಪಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!