CINEMA| ಆಸ್ಕರ್ ವಿನ್ನಿಂಗ್ ಕೀರವಾಣಿಗೆ ವಿಶೇಷ ಹಾಡನ್ನು ಅರ್ಪಿಸಿದ ಅಮೆರಿಕನ್ ಟಾಪ್ ಸಂಗೀತಗಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಟು ನಾಟು ಹಾಡಿಗೆ ಕೀರವಾಣಿ ವಿಶ್ವದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಆಸ್ಕರ್ ಪ್ರಶಸ್ತಿಯನ್ನು ದಕ್ಕಿಸಿಕೊಂಡಿಸಿದ್ದಾರೆ. ಕೀರವಾಣಿಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಸ್ಕರ್ ಪ್ರಶಸ್ತಿ ಸ್ವೀಕರಿಸಿದ ನಂತರ ಕೀರವಾಣಿ ಆಸ್ಕರ್ ವೇದಿಕೆಯಲ್ಲಿ ಮಾಡಿದ ಭಾಷಣ ವೈರಲ್ ಆಗಿತ್ತು.

ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೀರವಾಣಿ.. ನಾನು ಬಾಲ್ಯದಿಂದಲೂ ಕಾರ್ಪೆಂಟರ್ಸ್‌ ಸಂಗೀತ ಕೇಳುತ್ತಾ ಬೆಳೆದವನು. ಇಂದು ಸಂಗೀತ ನಿರ್ದೇಶಕನಾಗಿ ಪ್ರಶಸ್ತಿ ಪಡೆದು ಆಸ್ಕರ್ ವೇದಿಕೆಯಲ್ಲಿ ನಿಂತಿದ್ದೇನೆ. `There was only one wish on my mind. So Rajamouli’s and my families.. RRR has to win pride of every Indian and must put me on the top the world’ ಎಂದು ಇಂಗ್ಲಿಷ್ ಸಾಹಿತ್ಯದೊಂದಿಗೆ ಅಮೇರಿಕನ್ ಪಾಪ್ ಸಂಗೀತಗಾರ ಕಾರ್ಪೆಂಟರ್ಸ್‌ ಶೈಲಿಯಲ್ಲಿ ಹಾಡಿದ್ದರು.

ಇತ್ತೀಚೆಗಷ್ಟೇ ಇದನ್ನು ನೋಡಿದ ಕಾರ್ಪೆಂಟರ್‌ನ ಟಾಪ್ ಸಂಗೀತಗಾರ ರಿಚರ್ಡ್ ಕಾರ್ಪೆಂಟರ್ ಅವರು ಪಿಯಾನೋ ನುಡಿಸುತ್ತಾ “ಯು ಆರ್ ಆನ್ ದ ಟಾಪ್ ಆಫ್ ದಿ ವರ್ಲ್ಡ್” ಎಂದು ಹಾಡುವ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಗೆದ್ದ ಚಂದ್ರ ಬೋಸ್ ಮತ್ತು ಕೀರವಾಣಿಗೆ ಅಭಿನಂದನೆಗಳು ಎಂದು ಹೇಳಿದರು. ಇದನ್ನು ನೋಡಿದ ಕೀರವಾಣಿ ಮತ್ತು ರಾಜಮೌಳಿ ಅಚ್ಚರಿಗೊಂಡಿದ್ದಾರೆ. ಈ ವೀಡಿಯೋ ನೋಡಿದ ನಂತರ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದೆ ಭಾವುಕರಾಗಿ ಕಣ್ಣೀರಿಟ್ಟರು. ಇದು ನಮ್ಮ ಕುಟುಂಬಕ್ಕೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ತುಂಬಾ ಧನ್ಯವಾದಗಳು ಸರ್ ಎಂದು ಕೀರವಾಣಿ ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಕೀರವಾಣಿ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಾರೆ.. ನಾನು ಇದನ್ನು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಇದು ವಿಶ್ವದ ಅತ್ಯುತ್ತಮ ಉಡುಗೊರೆ ಎಂದು ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!