ಅಮೆರಿಕದ ಪಾಪ್ ಸ್ಟಾರ್ ಆರನ್ ಕಾರ್ಟರ್ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಪಾಪ್ ಸ್ಟಾರ್ ಆರನ್ ಕಾರ್ಟರ್ ಶವವಾಗಿ ಪತ್ತೆಯಾಗಿದ್ದಾರೆ. ಲಾಸ್ ಏಂಜಲೀಸ್ ಬಳಿ ಮನೆಯಲ್ಲಿ ಕಾರ್ಟರ್ ಶವ ಪತ್ತೆಯಾಗಿದೆ. ಕೆಲ ವರ್ಷದಿಂದ ಡ್ರಗ್ಸ್ ವ್ಯಸನದ ಸಮಸ್ಯೆಗಳ ಜತೆ ಕಾರ್ಟರ್ ಗುರುತಿಸಿಕೊಂಡಿದ್ದು, ಸಾವಿಗೆ ಕಾರಣ ತಿಳಿದಿಲ್ಲ.

ಹಿಟ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಜೊತೆ ಕೆಲಸ ಮಾಡಿದ್ದ ಕಾರ್ಟರ್, ನಂತರ ತಾರೆಯಾಗಿ ಮಿಂಚಿದ್ದರು. ಶೋ ಒಂದರಲ್ಲಿ ಕಾರ್ಟರ್ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದರು. ಅವರ ವೈಯಕ್ತಿಕ ಜೀವನದ ಬಗ್ಗೆ ಟಾಬ್ಲಾಯ್ಡ್ ಪತ್ರಿಕೆಗಳು ಸಾಕಷ್ಟು ವರದಿ ಮಾಡಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!