EWS| ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಕೋಟಾ ಎತ್ತಿ ಹಿಡಿದ ಸುಪ್ರಿಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) 10 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಯುಯಲಲಿತ್‌ ಅವರ ನೇತೃತ್ವದ ಐವರು ಸದಸ್ಯರ ಪೀಠವು 4:1 ಬಹುಮತದೊಂದಿಗೆ ನಾಲ್ವರು ನ್ಯಾಯಾಧೀಶರು EWS ಕೋಟಾದ ಪರವಾಗಿ ತೀರ್ಪು ನೀಡಿದರು.

ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು, “ಇದು ಮೂಲಭೂತ ರಚನೆಯನ್ನು ಉಲ್ಲಂಘಿಸಿದೆಯೇ ಎಂಬುದರ ಕುರಿತು ಕೆಲವು ಸಮಸ್ಯೆಗಳು ಮತ್ತು ನಿರ್ಣಯದ ಅಂಶಗಳಿವೆ, ಎರಡನೆಯದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಇಡಬ್ಲ್ಯೂಎಸ್ ಪಡೆಯುವುದರಿಂದ ಹೊರಗಿಡುವುದು ಸಮಾನತೆಯ ಸಂಹಿತೆ ಮತ್ತು ಮೂಲ ರಚನೆಯನ್ನು ಉಲ್ಲಂಘಿಸುತ್ತದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು 103 ನೇ ಸಂವಿಧಾನದ ತಿದ್ದುಪಡಿಯ ಸಿಂಧುತ್ವದ ಸುತ್ತಲಿನ ಕಾನೂನು ಸಮಸ್ಯೆಗಳ ಕುರಿತು ತೀರ್ಪು ನೀಡಿದೆ

SC, ST ಮತ್ತು OBC ಹೊರತುಪಡಿಸಿ ಇತರ ವ್ಯಕ್ತಿಗಳು ಮತ್ತು ವಾರ್ಷಿಕ ಕುಟುಂಬ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಂವಿಧಾನದ 15(6) ಮತ್ತು 16(6) ವಿಧಿಗಳನ್ನು ಪರಿಚಯಿಸಿ 103 ನೇ ತಿದ್ದುಪಡಿ ಕಾಯಿದೆಯೊಂದಿಗೆ -ಉದ್ಯೋಗಗಳು ಮತ್ತು ಪ್ರವೇಶಗಳಲ್ಲಿ 10 ಪ್ರತಿಶತ ಮೀಸಲಾತಿಯನ್ನು ಒದಗಿಸುವ ಕುರಿತು EWS ಕೋಟಾವನ್ನು ಪರಿಚಯಿಸಲಾಗಿತ್ತು. ಆದರೆ ಈ ಕೋಟಾದ ಸಿಂಧುತ್ವದ ಕುರಿತು ಪ್ರಶ್ನೆಗಳು ಎದ್ದಿದ್ದವು. ಪ್ರಸ್ತುತ ವಿಚಾರಣೆ ನಡೆಸಿದ ನ್ಯಾಯಾಲಯ EWS ಕೋಟಾವನ್ನು ಎತ್ತಿಹಿಡಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!