ಸ್ಟೇಜ್‌ನಲ್ಲೇ ವಾಲುತ್ತಾ ಹೆಜ್ಜೆ ಹಾಕಿದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ : ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಡ್ಸ್‌, ಟಿಬಿ ಹಾಗೂ ಮಲೇರಿಯಾ ರೋಗದ ವಿರುದ್ಧ ಹೋರಾಡಲು ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡುತ್ತಿದ್ದ ವೇಳೆ ಸ್ಟೇಜ್‌ನಲ್ಲೇ ಅತ್ತಿತ್ತ ಕಣ್ಣು ಮಂಜಾದವರಂತೆ ಅತ್ತಿತ ವಾಲುತ್ತಾ ಹೆಜ್ಜೆ ಹಾಕಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಅಮೆರಿಕಾ ಅಧ್ಯಕ್ಷ ಬುಧವಾರ (ಸೆಪ್ಟೆಂಬರ್ 21) ನ್ಯೂಯಾರ್ಕ್‌ನಲ್ಲಿ ನಡೆದ ಜಾಗತಿಕ ನಿಧಿಯ ಏಳನೇ ಮರುಸಂಗ್ರಹ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾಷಣ ಮುಗಿಸಿದ ನಂತರ ಪೋಡಿಯಂ ಬಿಟ್ಟು ತೆರಳಿದ ಅವರು, ನಿಂತಲ್ಲೇ ಯಾವುದು ಲೋಕದಲ್ಲಿ ಕಳೆದು ಹೋದಂತೆ ಕಾಣಿಸಿಕೊಂಡರು. ಅಲ್ಲದೇ ಇದೇ ವೇಳೆ ಅವರು ಏನನ್ನೋ ಹೇಳುತ್ತಿರುವುದು ಕೂಡ ಕಾಣಿಸುತ್ತಿದೆ. ಈ ದೃಶ್ಯವನ್ನು ಅನೇಕರು ಟ್ವಿಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜೋ ಬೈಡೆನ್ ಅವರು ಭಾಷಣ ಮಾಡುತ್ತಾ ಈ ರೀತಿ ಅಭೂತಪೂರ್ವವಾಗಿ ನಿಧಿ ಸಂಗ್ರಹವಾಗಲು ಕಾರಣರಾದ ಎಲ್ಲರಿಗೂ ಅವರು ನೀಡಿದ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದರು. ಎಲ್ಲಾ ಸಮುದಾಯದವರು ಆರೋಗ್ಯಕರವಾಗಿದ್ದಾರೆ ಮತ್ತು ಸಧೃಡರು ಎಂದು ಖಚಿತಪಡಿಸಿಕೊಳ್ಳಲು ಪಾಲುದಾರರೊಂದಿಗೆ ಕೆಲಸ ಮಾಡುವುದಾಗಿದೆ. ಇಲ್ಲಿ ಯಾವುದೇ ಅಸ್ಪಷ್ಟತೆ ಇಲ್ಲ. ಕನಿಷ್ಠ ಎಲ್ಲರೂ ಆರೋಗ್ಯ ಹಾಗೂ ಸಧೃಡವಾಗಲು ಸಣ್ಣ ನೆರವು ನೀಡಿ, ಇದರಿಂದ ಎಲ್ಲೆಡೆ ಜನರು ಘನತೆಯಿಂದ ಬದುಕಬಹುದು ಎಂದು ಅವರು ಶ್ವೇತಭವನದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಹೀಗೆ ಭಾಷಣ ಮುಗಿಸಿದ ನಂತರ 79 ವರ್ಷ ಪ್ರಾಯದ ಅಮೆರಿಕಾ ಅಧ್ಯಕ್ಷ, ಪೋಡಿಯಂ ಬಿಟ್ಟು ಬಲಕ್ಕೆ ತಿರುಗಿದ್ದು, ಅಲ್ಲೇ ಸೆಕೆಂಡುಗಳ ಕಾಲ ನಿಂತಿದ್ದಾರೆ. ಅಲ್ಲದೇ ಅಲ್ಲೇ ಕೆಳಗಿಳಿಯಲು ನೋಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಆಯೋಜಕರು ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ಎರಡು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದು, ಅಮೆರಿಕಾ ಅಧ್ಯಕ್ಷರ ಈ ವರ್ತನೆ ಅನೇಕರನ್ನು ಅಚ್ಚರಿಗೆ ದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!