ಲುಲೂ ಮಾಲ್ ನಮಾಜ್: ಸುಂದರಕಾಂಡ ಪಠಣೆ ಎಚ್ಚರಿಕೆ ನೀಡಿದ ಹಿಂದೂ ಮಾಹಾಸಭಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಲಕ್ನೋದಲ್ಲಿ ಉದ್ಘಾಟನೆಗೊಂಡ ಲುಲೂ ಮಾಲ್​ನ ತೆರೆದ ಜಾಗದಲ್ಲಿ ಕೆಲವು ಮಂದಿ ನಮಾಜ್​ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆಯೇ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಮುಂದುವರಿದರೆ ಸುಂದರ‌ಕಾಂಡ ಪಠಿಸಿ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದೆ.

ಯೋಗಿ ಆದಿತ್ಯನಾಥ್​ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್​ ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿದೆ. ಇದರ ಹೊರತಾಗಿಯೂ ಕೆಲವರು ಲುಲೂ ಮಾಲ್​ನಲ್ಲಿ ನಮಾಜ್​ ಮಾಡಲಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!