ಎಲ್ಲೆಡೆ ಉದ್ಯೋಗ ಕಡಿತ, ಆದರೆ ಈ ಕಂಪನಿಯಿಂದ ಉದ್ಯೋಗಿಗಳಿಗೆ ಕಾರ್ ಗಿಫ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗೂಗಲ್ ಮತ್ತು ಮೆಟಾದಂತಹ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವಾಗ, ಭಾರತೀಯ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕಾರುಗಳನ್ನು ನೀಡಿದೆ. ಅಹಮದಾಬಾದ್ ಮೂಲದ ತ್ರಿಧ್ಯಾ ಟೆಕ್ ತನ್ನ ಕಂಪನಿಯ 13 ಉದ್ಯೋಗಿಗಳಿಗೆ 13 ದುಬಾರಿ ಕಾರುಗಳನ್ನು ನೀಡಿದೆ. ಈ ಕುರಿತು ಕಂಪನಿಯ ಎಂಡಿ ರಮೇಶ್ ಮರಂದ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ತಮ್ಮ ಕಂಪನಿಯ ಯಶಸ್ಸಿನ ಹಿಂದೆ ತಮ್ಮ ಶ್ರಮಶೀಲ ಉದ್ಯೋಗಿಗಳಿದ್ದಾರೆ.

ಅವರ ಶ್ರಮ ಮತ್ತು ಬದ್ಧತೆಗೆ ಪ್ರತಿಫಲವಾಗಿ ಈ ಕಾರುಗಳನ್ನು ನೀಡಲಾಗುತ್ತಿದೆ ಎಂದರು. ಮುಂದೆಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಇಂತಹ ಉಡುಗೊರೆಗಳನ್ನು ನೀಡಲಾಗುವುದು ಎಂದರು. ಹೀಗೆ ಪ್ರೋತ್ಸಾಹಿಸಿದರೆ, ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ ಎಂದರು.

ಸಂಸ್ಥೆಯ ಆಡಳಿತ ಮಂಡಳಿಯು ತಮ್ಮ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಎಂದು ನೌಕರರು ಹೇಳಿದರು. ಕೆಲವು ಕಂಪನಿಗಳು ಲಾಭವನ್ನು ಹೊರತುಪಡಿಸಿ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸುತ್ತವೆ. ಕೆಲವು ಕಂಪನಿಗಳು ಉದ್ಯೋಗಿಗಳಿಗೆ ಅನೇಕ ಪ್ರಯೋಜನಗಳನ್ನು ನೀಡುವ ಮೂಲಕ ಮತ್ತು ಅವರನ್ನು ಪ್ರೋತ್ಸಾಹಿಸುವ ಮೂಲಕ ವಿಭಿನ್ನವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!