ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ತೂಗು ಸೇತುವೆ ಕುಸಿದು 135 ಜನರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಏಳು ಮಂದಿ ನಿಯಮಿತ ಜಾಮೀನಿಗಾಗಿ ಗುರುವಾರ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮಚ್ಚು ನದಿಯ ಮೇಲಿನ ಬ್ರಿಟಿಷರ ಕಾಲದ ತೂಗು ಸೇತುವೆಯು ಅಕ್ಟೋಬರ್ 30, 2022 ರಂದು ಕುಸಿದುಬಿದ್ದಿತು. ತದನಂತರ ಖಾಸಗಿ ಸಂಸ್ಥೆಯೊಂದು ರಿಪೇರಿ ಮಾಡಿ ಪುನಃ ತೆರೆಯಲಾಯಿತು.
ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಮೊರ್ಬಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿಸಿ ಜೋಶಿ ತಮ್ಮ ಆದೇಶವನ್ನು ಫೆಬ್ರವರಿ 4 ಕ್ಕೆ ಕಾಯ್ದಿರಿಸಿದ್ದಾರೆ.
ಮೊರ್ಬಿ ಪೊಲೀಸರು ಕಳೆದ ವಾರ ಈ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಸೇತುವೆಯನ್ನು ನಿರ್ವಹಿಸುತ್ತಿದ್ದ ಮತ್ತು ಬ್ರಿಟಿಷರ ಕಾಲದ ರಚನೆಯನ್ನು ದುರಸ್ತಿ ಮಾಡಿದ ಓರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.
ಇತರ ಒಂಭತ್ತು ಮಂದಿ ಬಂಧಿತರಲ್ಲಿ ಸಂಸ್ಥೆಯ ಇಬ್ಬರು ಮ್ಯಾನೇಜರ್‌ಗಳು, ಇಬ್ಬರು ಟಿಕೆಟ್ ಬುಕ್ಕಿಂಗ್ ಕ್ಲರ್ಕ್‌ಗಳು, ಮೂವರು ಭದ್ರತಾ ಸಿಬ್ಬಂದಿ ಮತ್ತು ಒರೆವಾ ಗ್ರೂಪ್‌ನಿಂದ ದುರಸ್ತಿ ಕಾರ್ಯಗಳಲ್ಲಿ ತೊಡಗಿದ್ದ ಇಬ್ಬರು ಉಪ ಗುತ್ತಿಗೆದಾರರು ಸೇರಿದ್ದಾರೆ.
ಈ ಒಂಬತ್ತು ಮಂದಿಯ ಜಾಮೀನು ಅರ್ಜಿಯನ್ನು ಈ ಹಿಂದೆ ಗುಜರಾತ್ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಇಬ್ಬರು ಉಪ ಗುತ್ತಿಗೆದಾರರನ್ನು ಹೊರತುಪಡಿಸಿ ಉಳಿದ ಏಳು ಮಂದಿ ಗುರುವಾರ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಏಳು ಮಂದಿ ತಮ್ಮ ಜಾಮೀನು ಅರ್ಜಿಯಲ್ಲಿ, ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಸಿರುವುದರಿಂದ ಮತ್ತು ಇತರರಿಗೆ ಹೋಲಿಸಿದರೆ ಇಡೀ ಘಟನೆಯಲ್ಲಿ ಅವರ ಪಾತ್ರವು ತುಂಬಾ ಚಿಕ್ಕದಾಗಿದೆ ಎಂದು ಅವರು ಪರಿಹಾರವನ್ನು ಪಡೆಯಬೇಕೆಂದು ಪ್ರತಿಪಾದಿಸಿದ್ದಾರೆ.
ಎಲ್ಲಾ ಆರೋಪಿಗಳು ನೇರವಾಗಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು.
ಜೈಸುಖ್ ಪಟೇಲ್ ಸೇರಿದಂತೆ ಎಲ್ಲಾ ಹತ್ತು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 304, 308, 336, 337ಮತ್ತು 338 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.