Friday, March 31, 2023

Latest Posts

ಇಂದು ರೈತ ಪ್ರತಿನಿಧಿಗಳು ಹಾಗೂ ಸಿಎಂ ಶಿಂಧೆ, ಫಡ್ನವಿಸ್ ಭೇಟಿ: ಕೈಬಿಡ್ತಾರಾ ಪ್ರತಿಭಟನೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಖಿಲ ಭಾರತ ಕಿಸಾನ್ ಸಭಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆಯುತ್ತಿರುವ ರೈತ ಪಾದಯಾತ್ರೆಯ ನಡುವೆ, ಅವರ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು, ರಾಜ್ಯ ಸಚಿವರಾದ ದಾದಾ ಭೂಸೆ ಮತ್ತು ಅತುಲ್ ಸೇವ್ ಅವರು ಬುಧವಾರ ನಿಯೋಗವನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲು ನಾಸಿಕ್‌ನಿಂದ ಮುಂಬೈವರೆಗೆ ಸುದೀರ್ಘ ಪಾದಯಾತ್ರೆ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂತ್ರಾಲಯದಲ್ಲಿ ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಶಿಂಧೆ ಭೇಟಿಯಾದ ರೈತ ಮುಖಂಡರು ರೈತರು ಪ್ರಸ್ತಾಪಿಸಿದ ಎಲ್ಲ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. 40-50 ರಷ್ಟು ಸಮಸ್ಯೆಗಳು ಬಗೆಹರಿದಿದ್ದು, ಉಳಿದವುಗಳನ್ನು ನಾಳೆ ಸಿಎಂ, ಡಿಸಿಎಂ ಭೇಟಿ ಮಾಡಿ ಪರಿಹರಿಸಲಾಗುವುದು ಎಂದರು.

ದೊಡ್ಡ ಮಟ್ಟದ ಪ್ರತಿಭಟನೆಯಿಂದಾಗಿ ಎರಡು ಮಾರ್ಗಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನೆಯ ಪ್ರಮಾಣವನ್ನು ಪರಿಗಣಿಸಿ, ತುರ್ತು ಪರಿಸ್ಥಿತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ನಾಸಿಕ್‌ನಿಂದ ಮುಂಬೈವರೆಗೆ ಕಾಲ್ನಡಿಗೆ ಜಾಥಾ ನಡೆಯುತ್ತಿರುವುದರಿಂದ ಎರಡು ಲೈನ್‌ಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಪಡೆಗಳನ್ನು ನಿಯೋಜಿಸಿದ್ದೇವೆ ಎಂದು ಡಿಸಿಪಿ ಕಿರಣ್ ಕುಮಾರ್ ಚೌವ್ಹಾಣ್ ಹೇಳಿದ್ದಾರೆ.

ಈರುಳ್ಳಿಗೆ ಲಾಭದಾಯಕ ಬೆಲೆ, ಸಂಪೂರ್ಣ ಸಾಲ ಮನ್ನಾ, ಬಾಕಿ ಉಳಿದಿರುವ ವಿದ್ಯುತ್ ಬಿಲ್‌ಗಳ ಮನ್ನಾ ಮತ್ತು 12 ಗಂಟೆಗಳ ದೈನಂದಿನ ವಿದ್ಯುತ್ ಸರಬರಾಜು, ಅಕಾಲಿಕ ಮಳೆ ಹಾಗೂ ಇತರೆ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟಕ್ಕೆ ಸರ್ಕಾರಿ ವಿಮಾ ಕಂಪನಿಗಳಿಂದ ಪರಿಹಾರ ನೀಡುವಂತೆ ಒತ್ತಾಯ ಸೇರಿದಂತೆ ಹತ್ತು ಹಲವು ಬೇಡಿಕೆಗಳು ಸರ್ಕಾರದ ಮುಂದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!