Tuesday, March 28, 2023

Latest Posts

ತೆಲುಗು ರಾಜ್ಯಗಳಲ್ಲಿ ಇಂದು ಎಂಎಲ್ಸಿ ಚುನಾವಣೆಯ ಮತ ಎಣಿಕೆ: ಅಭ್ಯರ್ಥಿಗಳಲ್ಲಿ ಟೆನ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲುಗು ರಾಜ್ಯಗಳಲ್ಲಿ ಎಂಎಲ್‌ಸಿ ಚುನಾವಣೆ ಮತ ಎಣಿಕೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮತ ಎಣಿಕೆ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಪಿಯ ಎಲ್ಲಾ ಒಂಬತ್ತು ಎಂಎಲ್‌ಸಿ ಸ್ಥಾನಗಳಿಗೆ ಇದೇ ತಿಂಗಳ 13 ರಂದು ಮತದಾನ ನಡೆದಿತ್ತು. ಮೂರು ಪದವೀಧರ, ಎರಡು ಶಿಕ್ಷಕ ಮತ್ತು ನಾಲ್ಕು ಸ್ಥಳೀಯ ಸಂಸ್ಥೆ ಕೋಟಾದ ಎಂಎಲ್‌ಸಿ ಸ್ಥಾನಗಳಿಗೆ ಚುನಾವಣೆ ನಡೆಯಿತು. ನಾಳೆ ತಡರಾತ್ರಿಯೊಳಗೆ ಶಿಕ್ಷಕರ ಎಂಎಲ್ಸಿ ಹುದ್ದೆಗಳ ಫಲಿತಾಂಶ ಹೊರಬೀಳುವ ಸಾಧ್ಯತೆಯಿದ್ದು, ನಾಳೆ ಸಂಜೆಯೊಳಗೆ ಪದವೀಧರ ಹುದ್ದೆಗಳ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಂಎಲ್ಸಿ ಚುನಾವಣೆ ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಲು ನಡೆದಿದೆ ಎಂದು ಟಿಡಿಪಿ ನಾಯಕ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಆಡಳಿತಾರೂಢ ವೈಸಿಪಿ ಪಕ್ಷವು ಚುನಾವಣಾ ನಿಯಮಗಳನ್ನು ಮನಬಂದಂತೆ ಉಲ್ಲಂಘಿಸಿದೆ ಎಂದರು.

ತೆಲಂಗಾಣ ರಾಜ್ಯದಲ್ಲಿ ಮಹಬೂಬ್‌ನಗರ-ರಂಗಾರೆಡ್ಡಿ-ಹೈದರಾಬಾದ್ ಜಿಲ್ಲೆಗಳ ಶಿಕ್ಷಕರ ಎಂಎಲ್‌ಸಿ ಚುನಾವಣೆಯ ಎಣಿಕೆ ಇಂದು ನಡೆಯಲಿದೆ. ಇದಕ್ಕಾಗಿ ಸರೂರ್ ನಗರ ಒಳಾಂಗಣ ಕ್ರೀಡಾಂಗಣದಲ್ಲಿ ಚುನಾವಣಾ ಎಣಿಕೆ ವ್ಯವಸ್ಥೆ ಪೂರ್ಣಗೊಂಡಿದ್ದು, ಬೆಳಗ್ಗೆ 8ರಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಚುನಾವಣಾ ಎಣಿಕೆ ಕಾರ್ಯದಲ್ಲಿ ಸುಮಾರು 1300 ಸಿಬ್ಬಂದಿ ಭಾಗಿಯಾಗಿದ್ದು, 28 ಟೇಬಲ್‌ಗಳನ್ನು ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್-ರಂಗ ರೆಡ್ಡಿ-ಮಹಬೂಬ್ ನಗರ ಶಿಕ್ಷಕರ ಎಂಎಲ್ಸಿ ಸ್ಥಾನಕ್ಕೆ ಒಟ್ಟು 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!