ಅಣ್ಣಾಮಲೈಯ ‘ಎನ್ ಮಣ್ಣ್ ಎನ್ ಮಕ್ಕಳ್’ ಯಾತ್ರೆಗೆ ಚಾಲನೆ ನೀಡಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರ ಮುಂದಾಳತ್ವದ ‘ಎನ್ ಮಣ್ಣ್ ಎನ್ ಮಕ್ಕಳ್’ (En Mann En Makkal) ಯಾತ್ರೆಗೆ ರಾಮೇಶ್ವರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಚಾಲನೆ ನೀಡಿದ್ದಾರೆ.

ಈ ಯಾತ್ರೆಕ 2024 ರ ಲೋಕಸಭೆಗೆ ಮುನ್ನ ರಾಜ್ಯದ ಎಲ್ಲಾ 39 ಲೋಕಸಭಾ ಕ್ಷೇತ್ರಗಳ ಮತದಾರರನ್ನು ತಲುಪಲಿದ್ದಾರೆ. ಅಣ್ಣಾಮಲೈ ಅವರು ಶನಿವಾರ ಬೆಳಗ್ಗೆ ರಾಮೇಶ್ವರಂ ರಾಮನಾಥ ಸ್ವಾಮಿ ದೇವಸ್ಥಾನದಿಂದ ಯಾತ್ರೆ ಆರಂಭಿಸಲಿದ್ದಾರೆ.

ರಾಮೇಶ್ವರಂನಿಂದ ಪ್ರಾರಂಭವಾಗುವ ಈ ಯಾತ್ರೆ ಜುಲೈ 28 ಮತ್ತು 29 ರಂದು ರಾಮನಾಥಪುರಂ ಜಿಲ್ಲೆಗೆ ತಲುಪುತ್ತದೆ. ಜುಲೈ 30 ರಂದು ಪರಮಕ್ಕುಡಿ, ಜುಲೈ 31 ರಂದು ತಿರುವಾಡನೈ ಮತ್ತು ಶಿವಗಂಗೈ ಬ್ಲಾಕ್, ಆಗಸ್ಟ್ 1 ರಂದು ತಿರುಪತ್ತೂರು ಮತ್ತು ಆಗಸ್ಟ್ 15 ರಂದು ಕನ್ಯಾಕುಮಾರಿ ತಲುಪಲಿದೆ. ಅಣ್ಣಾಮಲೈ ಅವರು ಯಾತ್ರೆಯ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸ್ವಯಂಸೇವಕರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಕನ್ಯಾಕುಮಾರಿ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಳೆಯಲಿದ್ದಾರೆ.

ಅಣ್ಣಾಮಲೈ ಅವರ ಈ ಪಾದಯಾತ್ರೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆವಿದ್ದು, ಎಲ್ಲಾ 234 ವಿಧಾನಸಭಾ ಕ್ಷೇತ್ರಗಳು ಮತ್ತು 39 ಲೋಕಸಭಾ ಕ್ಷೇತ್ರಗಳನ್ನು ಐದು ಹಂತಗಳಲ್ಲಿ ಭೇಟಿ ನೀಡಲಾಗುವುದು. ಮುಂದಿನ ವರ್ಷದ ಜನವರಿ ಮಧ್ಯದಲ್ಲಿ ಯಾತ್ರೆಯು ಚೆನ್ನೈನಲ್ಲಿ ಕೊನೆಗೊಳ್ಳಲಿದೆ.

ಈ ವೇಳೆ ಬಿಜೆಪಿಯ ರಾಜ್ಯ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳ ಕುರಿತು 10 ಲಕ್ಷ ಪುಸ್ತಕಗಳನ್ನು ವಿತರಿಸಲು ಯೋಜಿಸಿದೆ. ಮುಂದಿನ 6 ತಿಂಗಳಲ್ಲಿ 11 ಮೆಗಾ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ, ಇದರಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!