ನಾಳೆ ಮಂಗಳೂರಿನಲ್ಲಿ ಅಮಿತ್ ಶಾ ಅದ್ದೂರಿ ರೋಡ್‌ ಶೋ: ಗಮನಿಸಿ ವಾಹನ ಸಂಚಾರದಲ್ಲಿ ಬದಲಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳೂರು ನಗರದಲ್ಲಿ ನಾಳೆ ಸಂಜೆ ರೋಡ್‌ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆಯವರೆಗೆ ನಗರದ ವಿವಿಧ ಕಡೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಕೊಟ್ಟಾರಚೌಕಿ- ಕೆಪಿಟಿ- ನಂತೂರು- ಶಿವಭಾಗ್- ಬೆಂದೂರುವೆಲ್- ಕರಾವಳಿ ವೃತ್ತ- ವೆಲೆನ್ಸಿಯಾ -ಮಂಗಳಾದೇವಿವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ ಹಿಂದಿರುಗಿ ಹೋಗುವುದು. ಉಡುಪಿ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಬರುವ ಬಸ್‌ಗಳು ಕೊಟ್ಟಾರಚೌಕಿ- ಕೆಪಿಟಿ- ನಂತೂರು- ಬಟ್ಟಗುಡ್ಡೆ- ಬಿಜೈ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವುದು. ತಲಪಾಡಿ ಮತ್ತು ಪಡೀಲ್ ಕಡೆಯಿಂದ ಸ್ಟೇಟ್‌ಬ್ಯಾಂಕ್‌ಗೆ ಬರುವ ಎಲ್ಲಾ ಬಸ್‌ಗಳು ಪಂಪ್‌ವೆಲ್- ಕರಾವಳಿ ವೃತ್ತ- ಕಂಕನಾಡಿ ಸರ್ಕಲ್- ವೆಲೆನ್ಸಿಯಾ- ಮಂಗಳಾದೇವಿವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ ಹಿಂದಿರುಗುವುದು. ತಲಪಾಡಿ ಮತ್ತು ಪಡೀಲ್ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಬರುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳು ಪಂಪ್‌ವೆಲ್- ನಂತೂರು- ಬಟ್ಟಗುಡ್ಡೆ- ಬಿಜೈ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವುದು. ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಹೊರಡುವ ಎಲ್ಲಾ ಸರಕಾರಿ ಬಸ್‌ಗಳು ಕೆಎಸ್‌ಆರ್‌ಟಿಸಿ -ಕುಂಟಿಕಾನ ಮೂಲಕ ಕೆಪಿಟಿ ಅಥವಾ ಕೊಟ್ಟಾರಚೌಕಿಗೆ ಸಂಚರಿಸುವುದು.

ಕೊಟ್ಟಾರ ಚೌಕಿಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಲಘುವಾಹನಗಳು ಲೇಡಿಹಿಲ್-ಮಣ್ಣಗುಡ್ಡ-ಬಾಲಾಜಿ ಜಂಕ್ಷನ್- ಬಂದರ್ ಜಂಕ್ಷನ್ ಮೂಲಕ ಮುಂದಕ್ಕೆ ಚಲಿಸುವುದು. ಲಾಲ್‌ಭಾಗ್ ಕಡೆಯಿಂದ ಬಲ್ಮಠ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಬೆಸೆಂಟ್ ಸ್ಕೂಲ್ ಜಂಕ್ಷನ್-ಜೈಲು ರಸ್ತೆ-ಕರಂಲ್ಪಾಡಿ- ಬಂಟ್ಸ್‌ಹಾಸ್ಟೆಲ್- ಮಲ್ಲಿಕಟ್ಟೆಯಾಗಿ ಅಥವಾ ಪಿ.ವಿ.ಎಸ್- ಬಂಟ್ಸ್‌ಹಾಸ್ಟೆಲ್- ಮಲ್ಲಿಕಟ್ಟೆಯಾಗಿ ಸಂಚರಿಸುವುದು.

ವಾಹನ ಸಂಚಾರ ನಿಷೇತ ಪ್ರದೇಶಗಳು ರೋಡ್‌ಶೋ ನಡೆಯುವ ಮಾರ್ಗವಾದ ಟೌನ್‌ಹಾಲ್, ಕ್ಲಾಕ್‌ಟವರ್- ಹಂಪನಕಟ್ಟೆ- ಕೆಎಸ್‌ರಾವ್ ರಸ್ತೆ- ಎಂ.ಗೋವಿಂದ ಪೈ -ಪಿವಿಎಸ್ ವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7  ಗಂಟೆಯವರೆಗೆ ರೋಡ್‌ಶೋಗೆ ಬರುವ ವಾಹನಗಳ ಹೊರತಾಗಿ ಎಲ್ಲಾ ವಾಹನಗಳ ನಿಲುಗಡೆಯನ್ನು ನಿಷೇಸಲಾಗಿದೆ.

ವಾಹನ ನಿಲುಗಡೆ ನಿಷೇಧ
ಗೃಹ ಸಚಿವರು ಸಂಚರಿಸುವ ರಸ್ತೆ ಅಂದರೆ ಮೇರಿಹಿಲ್ ಹೆಲಿಪ್ಯಾಡ್‌ನಿಂದ ಕೆಪಿಟಿ ಜಂಕ್ಷನ್- ಬಟ್ಟಗುಡ್ಡೆ- ಕದ್ರಿಕಂಬ್ಳ- ಬಂಟ್ಸ್‌ಹಾಸ್ಟೆಲ್, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಜಂಕ್ಷನ್- ಎ.ಬಿ.ಶೆಟ್ಟಿ ವೃತ್ತದವರೆಗೆ ಹಾಗೂ ರೈಲ್ವೆ ನಿಲ್ದಾಣ ರಸ್ತೆ- ಟೌನ್‌ಹಾಲ್ ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗೆ 7  ಗಂಟೆಯಿಂದ ಸಂಜೆ ಕಾರ್ಯಕ್ರಮ ಮುಗಿಯುವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆ ನಿಷೇಸಲಾಗಿದೆ ಎಂದು ಮಂಗಳೂರು ಪೋಲಿಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!