ಜಗನ್ನಾಥ ರಥಯಾತ್ರೆ: ಮಂಗಳ ಆರತಿಯಲ್ಲಿ ಅಮಿತ್ ಶಾ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್‌ಗೆ ದಿನದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮಾಲ್‌ಪುರ ಪ್ರದೇಶದಲ್ಲಿ ರಥಯಾತ್ರೆಗೆ ಮುನ್ನ ಜಗನ್ನಾಥ ದೇವಸ್ಥಾನದಲ್ಲಿ ‘ಮಂಗಳ ಆರತಿ’ (ಪೂಜೆಯ ಭಾಗ) ದಲ್ಲಿ ಭಾಗವಹಿಸಿದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಚರಿಸಲಾಗುವ ‘ರಥ ಯಾತ್ರೆ’ ಉತ್ಸವವು ದೇಶದ ಎರಡನೇ ಅತಿದೊಡ್ಡ ರಥಯಾತ್ರೆ ಎಂದು ಪರಿಗಣಿಸಲಾಗಿದೆ.

ನಂತರ ಗೃಹ ಸಚಿವರು ಎರಡು ಉದ್ಯಾನವನಗಳ ಉದ್ಘಾಟನೆ, ರೈಲ್ವೆ ಮೇಲ್ಸೇತುವೆ ಮತ್ತು ಆಸ್ಪತ್ರೆಯ ‘ಭೂಮಿಪೂಜೆ’ ಸೇರಿದಂತೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಹಮದಾಬಾದ್‌ನ ನ್ಯೂ ರಾನಿಪ್‌ನಲ್ಲಿ, ಗೃಹ ಸಚಿವರು ಬೆಳಗ್ಗೆ 9.15 ರ ಸುಮಾರಿಗೆ ಅಹಮಾದಾಬಾದ್‌ ಮುನ್ಸಿಪಲ್ ಕಾರ್ಪೊರೇಷನ್ (AMC) ಹೊಸದಾಗಿ ನಿರ್ಮಿಸಿದ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ. ಅಹಮದಾಬಾದ್‌ನ ಚಂದ್ಲೋಡಿಯಾ ಪ್ರದೇಶದಲ್ಲಿ ಎಎಂಸಿ ಮತ್ತು ರೈಲ್ವೇಸ್‌ನಿಂದ ಹೊಸದಾಗಿ ನಿರ್ಮಿಸಲಾದ ಜಗತ್‌ಪುರ ರೈಲ್ವೆ ಮೇಲ್ಸೇತುವೆಯನ್ನು ಗೃಹ ಸಚಿವರು ಉದ್ಘಾಟಿಸಲಿದ್ದಾರೆ.

ಜಗನ್ನಾಥ ರಥ ಯಾತ್ರೆಗೆ ಅಹಮದಾಬಾದ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದರು. ಈ ಸಂದರ್ಭದಲ್ಲಿ ಸಿಎಂ ಭೂಪೇಂದ್ರ ಪಟೇಲ್ ಪಹಿಂದ್ ವಿಧಿ ನೆರವೇರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!