ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬರೋಬ್ಬರಿ 18ಲಕ್ಷ ರೂ.‌ಕರೆಂಟ್ ಬಿಲ್!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಗೆ ಅನುಮೋದನೆ ನೀಡಿದ್ದು, ಇದೀಗ ಏಕಾಏಕಿ ವಿದ್ಯುತ್ ಬಿಲ್ ಏರಿಕೆಯಾಗುತ್ತಿದೆ ಎನ್ನುವುದು ಹಲವರ ದೂರಾಗಿದೆ. ಕಮರ್ಷಿಯಲ್ ಕರೆಂಟ್ ಬಿಲ್‌ನಲ್ಲಿ ಹಣ ದುಪ್ಪಟ್ಟಾಗಿದ್ದು, ಗ್ರಾಹಕರಿಗೆ ತಲೆ ಬಿಸಿಯಾಗಿದೆ.

ಇದೇ ರೀತಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಬರೋಬ್ಬರಿ 18 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿದೆ. ಹೌದು, ಕ್ಯಾಂಪಸ್‌ನ ಮೇ ತಿಂಗಳ ಬಿಲ್ 18 ಲಕ್ಷ ರೂಪಾಯಿ ಬಂದಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. ಒಂದೇ ತಿಂಗಳಲ್ಲಿ ಇಷ್ಟೊಂದು ಬಿಲ್ ಬಂದಿರುವುದಕ್ಕೆ ಆಡಳಿತ ಮಂಡಳಿ ಶಾಕ್ ಆಗಿದ್ದು, ಹೆಸ್ಕಾಂಗೆ ಪತ್ರ ಬರೆಯುವ ಬಗ್ಗೆ ಚಿಂತನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!