May 20, 2026
Wednesday, May 20, 2026
spot_img

ಕಾಗೆಗಳು ಕೂಗ್ತಾ ಇರ್ತವೆ, ನನ್ನ ಆರೋಗ್ಯಕ್ಕೂ ಅವರ ಮಾತಿಗೂ ಸಂಬಂಧ ಇಲ್ಲ ಎಂದ ಬಿಗ್‌ಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟ ಅಮಿತಾಬ್ ಬಚ್ಚನ್‌ಗೆ ಅನಾರೋಗ್ಯ ಕಾಡಿದ್ದು, ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಅಮಿತಾಬ್‌ಗೆ 83 ವರ್ಷ ಆಗಿರುವ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ನಿಜ ಎಂದು ಅಭಿಮಾನಿಗಳು ಬೇಸರಿಸಿಕೊಂಡಿದ್ದರು.

ಆದರೆ ಇದೆಲ್ಲ ಸುಳ್ಳು ಸುದ್ದಿ, ನನ್ನ ಆರೋಗ್ಯದ ಬಗ್ಗೆ ಯಾಕಿಷ್ಟು ಸುಳ್ಳು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಅಮಿತಾಬ್‌ ಪೋಸ್ಟ್‌ ಮಾಡಿದ್ದಾರೆ. ಹದ್ದುಗಳು ಶಾಂತವಾದಾಗ ಮಾತ್ರ ಗಿಳಿಗಳು ಮಾತನಾಡೋಕೆ ಸಾಧ್ಯ, ನಾನು ಈಗಿನ್ನೂ ರೊಟ್ಟಿ ಹಾಗೂ ಸೊಪ್ಪಿನ ಪಲ್ಯ ತಿಂದು ಕೂತಿದ್ದೇನೆ. ಅಷ್ಟ್ರಲ್ಲೇ ಕಾಗೆಗಳು ಕೂಗೋಕೆ ಶುರು ಮಾಡಿವೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಅಮಿತಾಬ್‌ ಸ್ವತಃ ಕಾರ್‌ ಓಡಿಸಿಕೊಂಡು ಹೋಗಿದ್ದನ್ನು ಕೆಲ ಅಭಿಮಾನಿಗಳು ನೋಡಿದ್ದು, ಅನಾರೋಗ್ಯ ರೂಮರ್‌ ಅಷ್ಟೆ ಎಂದು ಅರ್ಥ ಮಾಡಿಕೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !