ಅಮಿತಾಭ್ ಬಚ್ಚನ್​ ಪುರುಷತ್ವದ ಸಂಕೇತ: ತಾಲಿಬಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರನ್ನು ಇಷ್ಟಪಡುವವರು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ವಿದೇಶದಲ್ಲೂ ಇದ್ದಾರೆ.

80ರ ವಯಸ್ಸಿನಲ್ಲೂ ಅಮಿತಾಭ್ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಇದ್ದಾರೆ ಎಂದರೆ ಅದು ಸಣ್ಣ ಮಾತಲ್ಲ. ಹಲವು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ, ಹಲವು ಅನಾರೋಗ್ಯ ಸಮಸ್ಯೆಗಳಿದ್ದರೂ ಅದನ್ನು ಮೆಟ್ಟಿ ನಿಂತಿದ್ದಾರೆ.

ಇದೀಗ ತಾಲಿಬಾನಿಗಳೂ ಅಮಿತಾಭ್​ ಬಚ್ಚನ್​ ಅವರನ್ನು ಪ್ರಶಂಸಿಸಿದೆ. ಈ ಕುರಿತು ತಾಲಿಬಾನ್​ ಪಬ್ಲಿಕ್​ ರಿಲೇಷನ್ಸ್​ ಡಿಪಾರ್ಟ್​ಮೆಂಟ್​ (Taliban Public Relations Department) ಮಾಡಿರುವ ಟ್ವೀಟ್​ ಒಂದು ಸಕತ್​ ಸದ್ದು ಮಾಡುತ್ತಿದೆ. ಅಮಿತಾಭ್ ಬಚ್ಚನ್ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಅಮಿತಾಭ್ ಬಗ್ಗೆ ಬರೆಯಲಾಗಿದೆ. ಅಮಿತಾಭ್ ಬಚ್ಚನ್ ಒಬ್ಬ ಭಾರತೀಯ ನಟ ಮತ್ತು ಅಫ್ಘಾನಿಸ್ತಾನದಲ್ಲಿ ಚೆನ್ನಾಗಿ ಇಷ್ಟಪಟ್ಟಿರುವ ವ್ಯಕ್ತಿ, ಇವರು ಪುರುಷತ್ವದ ಸಂಕೇತ. ಕೆಲವರಿಗೆ ಮಾತ್ರ ತಿಳಿದಿದೆ. ಇವರು ಆಫ್ಘನ್ ಗೌರವಾನ್ವಿತ ಪ್ರಜೆ ಎಂದು. 1980 ರ ದಶಕದಲ್ಲಿ ನಮ್ಮ ಭವ್ಯವಾದ ರಾಷ್ಟ್ರಕ್ಕೆ ಅವರು ಭೇಟಿ ನೀಡಿದಾಗ, ಅಂದಿನ ಅಧ್ಯಕ್ಷ ನಜೀಬುಲ್ಲಾ ಅವರಿಗೆ ಈ ಗೌರವಾನ್ವಿತ ಗೌರವವನ್ನು ನೀಡಿದರು ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಅಮಿತಾಭ್​ ಬಚ್ಚನ್​ ಅವರನ್ನು ಈ ಪರಿ ಹೊಗಳಿರುವುದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

ಇದೇ ಟ್ವೀಟ್​ನಲ್ಲಿ ತಾಲಿಬಾನ್​ ಪಬ್ಲಿಕ್​ ರಿಲೇಷನ್ಸ್​ ಡಿಪಾರ್ಟ್​ಮೆಂಟ್​ ವಿರಾಟ್​ ಕೊಹ್ಲಿಯವರನ್ನು ಸಲಿಂಗಕಾಮಿ ಎಂದೂ ಹೇಳಿದೆ. ಅದಕ್ಕೆ ಕಾರಣವೇಂದರೆ, ಅಮಿತಾಭ್​ ಬಚ್ಚನ್​ ಅವರ ಟ್ವೀಟ್​ಗೆ ಒಬ್ಬ ವ್ಯಕ್ತಿ ವಿರಾಟ್​ ಅವರ ಫೋಟೋ ಶೇರ್​ ಮಾಡಿಕೊಂಡು ‘ನಮ್ಮ ಭಾಯಿಜಾನ್ ತಾಲಿಬಾನ್ ಸೇರಬಹುದೇ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರೋ ಪಿಆರ್ ತಂಡ, ‘ಇಲ್ಲ ಇಲ್ಲ. ಅವರು ಸಲಿಂಗಕಾಮಿ. ಅವರ ಬಾಡಿ ಲಾಂಗ್ವೇಜ್ ನೋಡಿ’ ಎಂದು ಪ್ರತಿಕ್ರಿಯೆ ನೀಡಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!