Asian Games | ಇಂಡಿಯಾ ಮಹಿಳಾ, ಪುರುಷ ಚೆಸ್​ ತಂಡಕ್ಕೆ ಬೆಳ್ಳಿ ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪದಕಗಳ ಬೇಟೆಯನ್ನು ಮುಂದುವರಿಸಿದೆ.

ಬುದ್ಧಿಮತ್ತೆಯ ಕ್ರೀಡೆಯಾದ ಚೆಸ್​ನಲ್ಲಿ ಮಹಿಳಾ ಮತ್ತು ಪುರುಷ ತಂಡಗಳೆರಡೂ ಬೆಳ್ಳಿಯನ್ನು ಗೆದ್ದಿವೆ. 86 ಕೆಜಿ ವಿಭಾಗದ ಕುಸ್ತಿಯಲ್ಲಿ ದೀಪಕ್​ ಪೂನಿಯಾ ರಜತ ಸಾಧನೆ ಮಾಡಿದರು. ಈ ಮೂಲಕ ಪದಕಗಳ ಸಂಖ್ಯೆ 107ಕ್ಕೆ ಏರಿದೆ.

ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ, ಇಂಟರ್‌ನ್ಯಾಶನಲ್ ಮಾಸ್ಟರ್ ವೈಶಾಲಿ ರಮೇಶ್‌ಬಾಬು, ವಂತಿಕಾ ಅಗರವಾಲ್ ಮತ್ತು ಸವಿತಾಶ್ರೀ ಬಾಸ್ಕರ್ ಅವರು ತಮ್ಮ ಕೌಶಲ್ಯ ಪ್ರದರ್ಶಿಸಿ 15 ಮ್ಯಾಚ್ ಪಾಯಿಂಟ್‌ಗಳೊಂದಿಗೆ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾವನ್ನು 4-0 ಅಂತರದಲ್ಲಿ ಸೋಲಿಸಿ ರಜತ ಪದಕವನ್ನು ಪಡೆದರು.

ಅಗ್ರ ಶ್ರೇಯಾಂಕದ ಅರ್ಜುನ್ ಎರಿಗೈಸಿ, ಡಿ ಗುಕೇಶ್, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಪೆಂಟಾಲ ಎಲ್ಲರೂ ತಮ್ಮ ಎದುರಾಳಿ ವಿರುದ್ಧ ಜಯ ಸಾಧಿಸಿದರೆ, ಗ್ರ್ಯಾಂಡ್​ಮಾಸ್ಟರ್​ ಆರ್ ಪ್ರಗ್ನಾನಂದ್​ ಅವರು ಡ್ರಾ ಸಾಧಿಸಿದರು. ಇದರಿಂದ ಇರಾನ್ ಚಿನ್ನ ಗೆದ್ದಿತು.

ಪುರುಷರ 86 ಕೆಜಿ ವಿಭಾಗದ ಫೈನಲ್‌ನಲ್ಲಿ ಕುಸ್ತಿಪಟು ದೀಪಕ್ ಪೂನಿಯಾ ಅವರು ಇರಾನ್‌ನ ಹಸನ್ ಯಜ್ದಾನಿ ವಿರುದ್ಧ 0-10 ಅಂಕಗಳ ಅಂತರದಿಂದ ಸೋತು, ಬೆಳ್ಳಿಗೆ ತೃಪ್ತಿಪಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!