BTOWN| ಟ್ರಾಫಿಕ್‌ಗೆ ಅಮಿತಾಬ್‌ ಸುಸ್ತು: ಶೂಟಿಂಗ್‌ ಸ್ಥಳಕ್ಕೆ ಹೋಗಲು ಏನ್‌ ಮಾಡಿದ್ರು ಗೊತ್ತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ 80 ವರ್ಷ ವಯಸ್ಸಾಗಿದ್ದರೂ, ಅವರು ಇನ್ನೂ ಚಲನಚಿತ್ರಗಳು ಮತ್ತು ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಈ ವಯಸ್ಸಿನಲ್ಲೂ ವಿಶ್ರಾಂತಿಯ ಮಾತಿಲ್ಲದೆ ದಿನನಿತ್ಯ ಚಿತ್ರೀಕರಣಕ್ಕೆ ಹೋಗುತ್ತಿದ್ದಾರೆ. ಎಷ್ಟೇ ಬೆಳೆದರೂ ತಗ್ಗಿ ನಡೆಯಬೇಕು ಎಂಬ ತತ್ವ ಅಮಿತಾಬ್ ಅವರದ್ದು. ಅಮಿತಾಬ್ ಬಚ್ಚನ್ ಅವರು ಇತ್ತೀಚೆಗೆ ಮಾಡಿದ ಕೆಲಸವನ್ನು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಶ್ಲಾಘಿಸಿದ್ದಾರೆ.

ಇತ್ತೀಚೆಗಷ್ಟೇ ಅಮಿತಾಬ್ ಮುಂಬೈನಲ್ಲಿ ಚಿತ್ರೀಕರಣಕ್ಕೆ ಹೋಗುತ್ತಿದ್ದಾಗ ಟ್ರಾಫಿಕ್ ಮಧ್ಯೆ ಕಾರಿನಿಂದ ಇಳಿದು ಬೈಕ್ ಸವಾರನಿಗೆ ಲಿಫ್ಟ್ ಕೇಳಿದ್ದರು. ಕೆಲವರು ಈ ಫೋಟೋ ತೆಗೆದು ವೈರಲ್ ಮಾಡಿದ್ದು, ಅಮಿತಾಬ್ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಅಮಿತಾಬ್ ಅವರು ಬೈಕ್ ಓಡಿಸುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.. ನನಗೆ ರೈಡ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಗೆಳೆಯಾ. ನಿಮಗೆ ಗೊತ್ತಿಲ್ಲ, ಆದರೆ ನೀವು ನನ್ನ ಕೆಲಸದ ಸ್ಥಳಕ್ಕೆ ಸಮಯಕ್ಕೆ ತಲುಪುವಂತೆ ಮಾಡಿದ್ದೀರಿ. ಟ್ರಾಫಿಕ್ ಜಾಮ್‌ನಿಂದ ನನ್ನನ್ನು ರಕ್ಷಿಸಿದೆ. ಕ್ಯಾಪ್, ಶಾರ್ಟ್ಸ್ ಮತ್ತು ಹಳದಿ ಶರ್ಟ್ ಧರಿಸಿದ್ದ ವ್ಯಕ್ತಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. ಓರ್ವ ಸೂಪರ್‌ ಸ್ಟಾರ್‌ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕೆನ್ನುವ ಅವರ ಸಮಯಸ್ಪೂರ್ತಿ, ಸಾಮಾನ್ಯ ವ್ಯಕ್ತಿಯಂತೆ ಲಿಫ್ಟ್‌ ಕೇಳಿದ್ದು ಎಲ್ಲವನ್ನು ಗಮನಿಸಿ ಇವರಿಂದ ನಾವು ಸಾಕಷ್ಟು ಕಲಿಯಬೇಕು ಅಂತಿದಾರೆ ಜನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!