VIRAL VIDEO| ಬೆಟ್ಟದ ಅರ್ಧ ಭಾಗ ರೆಸ್ಟೋರೆಂಟ್: ಒಂದೇ ಬಾರಿಗೆ 5,800 ಜನರಿಗೆ ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆ ಹೋಟೆಲ್‌ಗೆ ಹೋಗಲು ಸಾಕಷ್ಟು ಸಮಯ ಇರಬೇಕು. ಯಾಕೆಂದರೆ ನಿಮ್ಮ ಕಾರನ್ನು ಪಾರ್ಕ್‌ ಮಾಡೋದಕ್ಕೆ ಕನಿಷ್ಠ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ. ಈ ವಿಶ್ವದ ಅತಿದೊಡ್ಡ ರೆಸ್ಟೋರೆಂಟ್ ಚೀನಾದ ಚಾಂಗ್‌ಕಿಂಗ್‌ನಲ್ಲಿದೆ. ಇದು ಬೆಟ್ಟದ ಅರ್ಧ ಭಾಗವನ್ನು ಆಕ್ರಮಿಸಿಕೊಂಡಿದ್ದು, ಸುಮಾರು 900 ಟೇಬಲ್‌ಗಳಿವೆ. ಒಂದೇ ಬಾರಿಗೆ 5,800 ಜನರು ಕುಳಿತು ತಿನ್ನಬಹುದು. ಚಾಂಗ್‌ಕಿಂಗ್‌ನ ಹೊರವಲಯದಲ್ಲಿರುವ ನ್ಯಾನ್ ಜಿಲ್ಲೆಯ ಈ 3,300 ಚದರ ಮೀಟರ್ ಹೋಟೆಲ್‌ನಲ್ಲಿ ಟೇಬಲ್ ಅನ್ನು ಕಾಯ್ದಿರಿಸಿದರೂ ಕೂಡ ನಿಮ್ಮ ಟೇಬಲ್ ಹುಡುಕಲು ಸಮಯ ತೆಗೆದುಕೊಳ್ಳುತ್ತದೆ.

ಚೀನಾದ ಎಲ್ಲೆಡೆಯಿಂದ ಜನರು ಈ ಹೋಟೆಲ್‌ಗೆ ಬರುತ್ತಾರೆ. ಪ್ರತಿದಿನ ತಹರೇವಾರಿ ಖಾದ್ಯಗಳನ್ನು ಅಪಾರ ಸಂಖ್ಯೆಯ ಅಡುಗೆಯವರು ಇಲ್ಲಿ ಬೇಯಿಸುತ್ತಾರೆ. ನೂರಾರು ಮಾಣಿಗಳು, ಅಡುಗೆ ಸಿಬ್ಬಂದಿ ಮತ್ತು ಕ್ಯಾಷಿಯರ್‌ಗಳು ಸೇವೆಯನ್ನು ಒದಗಿಸುತ್ತಾರೆ.

ಈ ಹೋಟೆಲ್ ರಾತ್ರಿಯೂ ಫುಲ್ ಬ್ಯುಸಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಗಲಿಗಿಂತಲೂ ಹೆಚ್ಚು ಪ್ರವಾಸಿಗರು ರಾತ್ರಿಯಲ್ಲಿ ಬರುತ್ತಾರೆ. ಮಸಾಲೆಗಳೊಂದಿಗೆ ಬೇಯಿಸಿದ ತಾಜಾ ಆಹಾರ ಮತ್ತು ಉತ್ತಮ ಸೇವೆಯು ಇಲ್ಲಿಗೆ ಬರಲು ಜನರನ್ನು ಆಕರ್ಷಿಸುತ್ತದೆ. ಈ ಹೋಟೆಲ್ ಕಳೆದ ವರ್ಷ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!