Friday, June 2, 2023

Latest Posts

ಮೋದಿಯವರನ್ನು ತೆಗಳಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಅಮಿತ್‌ ಶಾ ಟಾಂಗ್

ಹೊಸದಿಗಂತ ವರದಿ ಹುಬ್ಬಳ್ಳಿ:

ಬಡವರ, ದಿನ ದಲಿತರ ಪರ ಸದಾಕಾಲ ಚಿಂತನೆ ಮಾಡುವ ಪ್ರಧಾನಿ ಮೋದಿ ಅವರನ್ನು ಸೋಲಿಸಲು ಕಾಂಗ್ರೆಸ್‌ ಸದಾ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು. ಮೋದಿಯವರನ್ನು ತೆಗಳಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸ್ಟ್ರಾಂಗ್‌ ಕೌಂಟರ್‌ ಕೊಟ್ಟಿದ್ದಾರೆ.

ಶುಕ್ರವಾರ ನವಲಗುಂದ ಮತಕ್ಷೇತ್ರದ‌ ಅಣ್ಣಿಗೇರಿ ಪಟ್ಟಣದ ಚುನಾವಣಾ ಪ್ರಚಾರ ಸಾರ್ವಜನಕ ಸಭೆಯಲ್ಲಿ ಮಾತನಾಡಿದ ಅವರು,
ಈ ಹಿಂದೆ‌ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೌಥ್ ಕಾ ಸೌದಾ ಗರ್, ಪ್ರೀಯಾಂಕ ಗಾಂಧಿ ವಾದ್ರ ಚೀಚ ಜಾತಿಯವರು ಅಂದಿದ್ದರು. ಈಗ ಖರ್ಗೆ ಅವರ ಸರದಿ ಎಂದು ಕಾಂಗ್ರೆಸ್ ಟಾಂಗ್ ಕೊಟ್ಟರು.

ನನ್ನ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ಕೊಟ್ಟಿದ್ದಾರೆ. ಪಿಎಫ್ಐ ಬ್ಯಾನ ಮಾಡಿದ್ದು ಸುರಕ್ಷತೆಗಾಗಿ. ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಸಂಘಟನೆ ಬ್ಯಾನ್ ಮಾಡಬೇಕೋ ಬೇಡವೋ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನವರು ಅಧಿಕಾರ ಬಂದ್ರೆ ಪಿಎಫ್ ಐ ಬ್ಯಾನ್ ಮಾಡಿರುವುದನ್ನು ವಾಪಸ್ ಪಡೆಯಲು ಹೇಳಿದ್ದರು‌. ಕಾಶ್ಮೀರದಲ್ಲಿ 370 ಕಾಯ್ದೆ ತೆಗೆದಾಗಲೂ ಇದೆ‌ ಕಾಂಗ್ರೆಸ್ ನವರು ರಕ್ತಪಾತವಾಗಲಿದೆ ತೆಗೆಯಬೇಡಿ ಎಂದಿದ್ದರು. ಈಗ ನನ್ನ ಹೇಳಿಕೆ ವಿರುದ್ಧ ದೂರು ನೀಡಿದ್ದು ಎಷ್ಟು ಸಮಂಜಸ ಎಂದರು.

ಮಹಾದಾಯಿ ಕಳಾಸ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಪ್ರಯತ್ನ ಮಾಡಲಿಲ್ಲ. ಮೋದಿಯವರು ಪರಿಹಾರ ಒದಗಿಸಿದರು. ಭದ್ರ, ಕೃಷ್ಣ ಅಪರ್ ಯೋಜನೆಗೆ ಅನುದಾನ ನೀಡಿದರು. ಆದರೆ ಕಾಂಗ್ರೆಸ್ ನವರು ಮಹಾದಾಯಿ ಹೋರಾಟಗಾರರ ಮೇಲೆ‌ ಗುಂಡು ಹಾಗೂ ಲಾಠಿ ಚಾರ್ಜ ಸಹ ಮಾಡಿಸಿದರು. ಇಲ್ಲಿಯ ರೈತರಿಗೆ ಅವಮಾನ ಮಾಡಿದರು. ಇಂತಹ ಕಾಂಗ್ರೆಸ್ ಗೆ ರೈತರ ಮತ ಕೇಳುವ ಅಧಿಕಾರವಿಲ್ಲ ಎಂದರು.

ಬಡತನದಲ್ಲಿ ಜನಿಸಿ, ಚಹಾ ಮಾರಿದ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದರಿಂದ ಬಡವರ, ದಿನ ದಲಿತರ ಕಷ್ಟವನ್ನು ಸಂಪೂರ್ಣವಾಗಿ ಅರಿತಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿ ಪರ ಯೋಜನೆಗಳನ್ನು ಸ್ಮರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!