Wednesday, June 7, 2023

Latest Posts

ನನ್ನ ಮಗಳು ಆತ್ಮಹತ್ಯೆ ಅಲ್ಲ, ಕೊಲೆ: ಹೈಕೋರ್ಟ್ ಮೆಟ್ಟಿಲು ಏರಿದ ಜಿಯಾ ಖಾನ್ ತಾಯಿ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಜಿಯಾ ಖಾನ್ (Zia Khan) ಆತ್ಮಹತ್ಯೆ ಕುರಿತು ಇಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು (Judgment) ಪ್ರಕಟಿಸಿದೆ. ಪ್ರಮುಖ ಆರೋಪಿ ಹಾಗೂ ಜಿಯಾ ಗೆಳೆಯ ಸೂರಜ್ ಪಂಚೋಲಿ (Suraj Pancholi) ಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.

ಇದೀಗ ಈ ತೀರ್ಪಿನ ವಿರುದ್ಧ ಹೈಕೋರ್ಟ್ (High Court) ಮೆಟ್ಟಿಲು ಏರುವುದಾಗಿ ಜಿಯಾ ತಾಯಿ ರಬಿಯಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗು ಹೇಗೆ ಸತ್ತಿತು ಎನ್ನುವುದರ ಸತ್ಯ ನನಗೆ ಗೊತ್ತಾಗಬೇಕು. ಇದೊಂದು ಕೊಲೆ ಎಂದು ಮತ್ತೆ ರಬಿಯಾ (Rabia) ನುಡಿದಿದ್ದಾರೆ.

ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಬಾಲಿವುಡ್ ಸಿನಿಮಾ ರಂಗದಲ್ಲಿ ಭಾರೀ ಆಘಾತ ಮೂಡಿಸಿತ್ತು. ಚಿತ್ರರಂಗದಲ್ಲಿ ಆಗ ತಾನೆ ಮಿಂಚುತ್ತಿದ್ದ ಜಿಯಾ ಏಕಾಏಕಿ 2013ರ ಜೂನ್ 3ರಂದು ಮುಂಬೈನ ಜುಹೂ ಅಪಾರ್ಟ್‍ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವಿಗೆ ಅವರ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಕಾರಣ ಎಂದು ಹೇಳಲಾಗಿತ್ತು.
ಸೂರಜ್ ಪಾಂಚೋಲಿ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು. ಆನಂತರ ಜುಲೈನಲ್ಲಿ ಸೂರಜ್ ಜಾಮೀನು ಪಡೆದರು. ಜಿಯಾ ಖಾನ್ ಅವರ ತಾಯಿ ರಬಿಯಾ ನಂತರ ವಿಶೇಷ ಮನವಿ ಸಲ್ಲಿಸಿದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

ಜಿಯಾ ತಾಯಿಯ ವಿರುದ್ಧ ಸೂರಜ್ ಪಾಂಚೋಲಿ, 100 ಕೋಟಿ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು. ರಬಿಯಾ ನೀಡಿದ ದೂರಿನ ಮೇಲೆ ಸಿಬಿಐ ಅಧಿಕಾರಿಗಳು ಸೂರಜ್ ಮನೆಯ ಮೇಲೆ ದಾಳಿ ಮಾಡಿದರು. ನಂತರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮತ್ತೆ ಸಪ್ಲಿಮೆಂಟರಿ ಚಾರ್ಜ್ ಶೀಟ್ ದಾಖಲಿಸಿದ್ದರು.

ತನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡಿದ್ದರು ರುಬಿಯಾ. ವಿಶೇಷ ತನಿಖಾ ದಳ ರಚಿಸುವಂತೆ ಕೋರ್ಟಿಗೆ ಮೊರೆ ಹೋದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದರು. ಕೇಸ್ ವಿಚಾರಣೆ ಬೇಗ ಮುಗಿಸುವಂತೆ ಮುಂಬೈ ಕೋರ್ಟಿಗೂ ಮನವಿ ಮಾಡಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!