ಕಾಡಿಗೆ ಮೇಯಲು ಹೋದ 140 ಗೋವುಗಳು ಸಾವು: 89ಕ್ಕೂ ಹೆಚ್ಚು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಗೋದಾವರಿ ನದಿ ತುಂಬಿ ಹರಿಯುತ್ತಿದ್ದು, ಭದ್ರಾಚಲಂನ ಕೊತ್ತಗೂಡೆಂ ಜಿಲ್ಲೆಯ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಭಾರೀ ಮಳೆಯಿಂದಾಗಿ ರಾಜಣ್ಣ ಸಿರಿಸಿಲ್ಲ ಜಿಲ್ಲೆಯಲ್ಲಿ ದುರಂತ ಸಂಭವಿಸಿದೆ. ವೀರನಪಲ್ಲಿ ಮಂಡಲದ ಮಡ್ಡಿಮಲ್ಲ ಮತ್ತು ರುದ್ರಂಗಿ ಮಂಡಲದ ದೇಗಾವತ್ ತಾಂಡಾದಲ್ಲಿ 140 ಹಸುಗಳು ಸಾವನ್ನಪ್ಪಿವೆ. ಕಾಡಿನಲ್ಲಿ ಮೇಯಲು ಹೋಗಿದ್ದ ಹಸುಗಳು ಮೃತಪಟ್ಟಿರುವುದು ಕಂಡು ಇಡೀ ಗ್ರಾಮವೇ ದುಃಖದ ಮಡುವಿನಲ್ಲಿ ತುಂಬಿದೆ.

ಮಡ್ಡಿಮಲ್ಲ ತಾಂಡಾದ 23 ರೈತರಿಗೆ ಸೇರಿದ ಹಸುಗಳು ಮೂರು ದಿನಗಳ ಹಿಂದೆ ಸಮೀಪದ ಕಾಡಿಗೆ ಮೇಯಲು ಹೋಗಿದ್ದವು. ಸಂಜೆ, ರಾತ್ರಿಯಾದರೂ ಗೋವುಗಳು ಮನೆಗೆ ಬಾರದ ಕಾರಣ ರೈತರು ಕಂಗಾಲಾಗಿ ಹುಡುಕಾಟ ನಡೆಸಿದ್ದಾರೆ. ಮುಂಜಾನೆಯೇ ಹಸುಗಳನ್ನು ಹುಡುಕುತ್ತಾ ಹೋದವರಿಗೆ ಆಥಾಗ ಎದುರಾಗಿತ್ತು. ಮೇಯುತ್ತಿದ್ದ ಹಸುಗಳು ಎಲ್ಲೆಂದರಲ್ಲಿ ಸತ್ತುಬಿದ್ದಿವೆ. 80 ಸತ್ತ ಹಸುಗಳ ಕಳೇಬರ ಕಂಡು ಮಮ್ಮಲ ಮರುಗಿದರು. ಇನ್ನೂ 49 ಹಸುಗಳು ನಾಪತ್ತೆಯಾಗಿದ್ದು, ಅವುಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ರುದ್ರಂಗಿ ಮಂಡಲ ದೇಗಾವತ್ ತಾಂಡಾ. ಕುನ್ನ ಸೊತ್ ತಾಂಡಾ ಹಾಗೂ ಜೋಟ್ಯ ತಾಂಡಕ್ಕೆ ಸೇರಿದ 100 ಹಸುಗಳ ಪೈಕಿ 60 ಹಸುಗಳು ಸಾವನ್ನಪ್ಪಿದ್ದು, 40 ಹಸುಗಳು ಕಣ್ಮರೆಯಾಗಿವೆ.

ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೈಪೋಥರ್ಮಿಯಾದಿಂದ ಎಲ್ಲಾ ಹಸುಗಳು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಶರೀರ ಉಷ್ಣಾಗ್ರತೆ ಶೂನ್ಯಮಟ್ಟಕ್ಕಿಳಿದಿರುವುದೇ ಗೋವುಗಳ ಸಾವಿಗೆ ಕಾರಣ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!