ಎಕ್ಸಾಂ ಹಾಲ್‌ನಲ್ಲಿ 500 ಹೆಣ್ಮಕ್ಳ ಮಧ್ಯೆ ಒಬ್ನೇ ಹುಡುಗ, ಅಲ್ಲೇ ತಲೆ ತಿರುಗಿ ಬಿದ್ದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಯುಸಿ ಎಕ್ಸಾಂ ಬರೆಯೋಕೆ ಬಂದ ಹುಡುಗನೊಬ್ಬ ಎಕ್ಸಾಂ ಹಾಲ್‌ನಲ್ಲಿದ್ದ ಹುಡುಗಿಯರನ್ನ ನೋಡಿ ತಲೆ ತಿರುಗಿ ಬಿದ್ದಿದ್ದಾನೆ. ಏನೋ ಎಕ್ಸಾಂ ಭಯಕ್ಕೆ ಬಿದ್ದಿದ್ದಾನೆ ಅಂದುಕೊಳ್ಳಬಹುದು, ಆದರೆ ಆತ ಬಿದ್ದಿದ್ದು, ಹೆಣ್ಮಕ್ಕಳನ್ನು ನೋಡಿಯೇ!

ಬಿಹಾರದ ನಳಂದಾದಲ್ಲಿ ಇಂಟರ್‌ಮೀಡಿಯೇಟ್ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ. ತರಗತಿಯಲ್ಲೇ ಮೂರ್ಛೆ ಹೋಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

500 ಹುಡುಗಿಯರ ಮಧ್ಯೆ ಕುಳಿತು ಪರೀಕ್ಷೆ ಬರೆಯಲು ಭಯವಾಗಿ ವಿದ್ಯಾರ್ಥಿ ಮನೀಶ್ ಶಂಕರ್ ತಲೆ ತಿರುಗಿ ಬಿದ್ದಿದ್ದಾನೆ. ಗಣಿತ ಎಂದರೆ ಮನೀಶ್‌ಗೆ ಭಯವಂತೆ, ಗಣಿತ ಪರೀಕ್ಷೆ ಎಂದು ಭಯದಲ್ಲಿದ್ದ ಮನೀಶ್ ಹುಡುಗಿಯರನ್ನು ನೋಡಿ ಇನ್ನೂ ನರ್ವಸ್ ಆಗಿ ಭಯದಿಂದ ಬಿದ್ದಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!