Tuesday, May 30, 2023

Latest Posts

ನೇಪಾಳದಲ್ಲಿ ಅಮೃತ್ ಪಾಲ್ ಸಿಂಗ್?: ತಪ್ಪಿಸಿಕೊಳ್ಳಲು ಬಿಡದಂತೆ ಭಾರತದಿಂದ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆ ಹೆಚ್ಚಿದ್ದು, ಈ ಹಿನ್ನೆಲೆ ಆತನನ್ನು ಬೇರೆ ರಾಷ್ಟ್ರಕ್ಕೆ ಹೋಗದಂತೆ ತಡೆಯಲು ನೇಪಾಳಕ್ಕೆ ಭಾರತ ಮನವಿ ಮಾಡಿದೆ.

ಭಾರತೀಯ ಪಾಸ್ಪೋರ್ಟ್ ಹಾಗೂ ಇನ್ಯಾವುದೇ ನಕಲಿ ಪಾಸ್ಪೋರ್ಟ್ ಗಳನ್ನು ಬಳಕೆ ಮಾಡಿ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಲು ನೇಪಾಳ ಸರ್ಕಾರಕ್ಕೆ ಭಾರತ ಸರ್ಕಾರ ಮನವಿ ಮಾಡಿದೆ.

ಕಾನ್ಸುಲರ್ ಸೇವೆಗಳ ಇಲಾಖೆಗೆ ಈ ಸಂಬಂಧ ಪತ್ರ ಬರೆಯಲಾಗಿದ್ದು, ಕಠ್ಮಂಡುವಿನಲ್ಲಿರುವ ಭಾರತದ ರಾಯಭಾರ ಕಚೇರಿ, ಸಿಂಗ್ ನೇಪಾಳದಲ್ಲಿ ಅಡಗಿರುವ ಸಾಧ್ಯತೆಯ ಬಗ್ಗೆ ತಿಳಿಸಿದೆ.

ಅಮೃತ್ ಪಾಲ್ ಸಿಂಗ್ ಹಲವು ಗುರುತುಗಳೊಂದಿಗೆ ಹಲವು ಪಾಸ್ಪೋರ್ಟ್ ಗಳನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಮಾ.18 ರಿಂದ ಅಮೃತ್ ಪಾಲ್ ಸಿಂಗ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!